ಬೆಂಗಳೂರು : ರಾಜ್ಯದಲ್ಲಿ ಅಂದಾಜು 9.82 ಲಕ್ಷ ಕೋಟಿ ಹೂಡಿಕೆಯಾಗಲಿದೆ, ಇದರಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ-2022’ ಶುಕ್ರವಾರಕ್ಕೆ ಮುಗಿಯಿತು. ಈ ಸಮಾವೇಶದಿಂದ ರಾಜ್ಯದಲ್ಲಿ ಅಂದಾಜು 9.82 ಲಕ್ಷ ಕೋಟಿ ಹೂಡಿಕೆಯಾಗಲಿದೆ, ಇದರಿಂದ ರಾಜ್ಯದಲ್ಲಿ 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಈ ಬಾರಿ ಶೇ 90 ರಷ್ಟು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯಾಗಲಿದೆ. ಇಂ ಧನ ಕ್ಷೇತ್ರದಲ್ಲಿ ಶೇ 38, ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ಶೇ 33, ಮೂಲಸೌಕರ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಶೇ 9 ಹೂಡಿಕೆಯಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಬಂದರುಗಳ ಅಭಿವೃದ್ಧಿಗೂ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಬೇಕಾದ ಜಾಗವನ್ನು ರೈತರಿಂದ ಖರೀದಿ ಮಾಡಲಾಗುತ್ತದೆ. ಮುಂದಿನ ಬಾರಿಯೂ ಕೂಡ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ, ಬಂಡವಾಳ ಹೂಡಿಕೆ ಒಪ್ಪಂದ ನಾವೇ ಜಾರಿ ಮಾಡುತ್ತೇವೆ ಎಂದು ಹೇಳಿದರು.
ಇನ್ನೂ, ರಾಜ್ಯದಲ್ಲಿ ಹೊಸದಾಗಿ 5 ಏರ್ಪೋರ್ಟ್ ನಿರ್ಮಾಣ ಆಗಲಿದ್ದು, ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ. ರಸ್ತೆ ಅಭಿವೃದ್ಧಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತೀನ್ ಗಡ್ಕರಿ ಹೆಚ್ಚು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
BIGG NEWS: ಬಿಜೆಪಿ ಅಧಿಕಾರಕ್ಕೆ ಬಂದು ಅಮಾಯಕರ ಕೈಯಲ್ಲಿ ಕೊಲೆ ಮಾಡಿಸುತ್ತಿದೆ; ಮಧು ಬಂಗಾರಪ್ಪ ವಾಗ್ದಾಳಿ
‘ಪೊಲೀಸರಿಗೆ ನನ್ನ ಮಗನನ್ನು ಹುಡುಕಲಾಗಲಿಲ್ಲ, ಪಕ್ಷದ ಕಾರ್ಯಕರ್ತರು ದೇಹವನ್ನು ಪತ್ತೆ ಮಾಡಿದರು’ : ಶಾಸಕ ರೇಣುಕಾಚಾರ್ಯ