ಬೆಂಗಳೂರು : ವಿಧಾನಸಭಾ ಸದಸ್ಯರ ಸೋಗಿನಲ್ಲಿ ಕ.ರಾ.ರ.ಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಿಬ್ಬಂದಿಗಳ ವರ್ಗಾವಣೆಗಾಗಿ ಕರೆ ಮಾಡಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಧಾನ ಸಭಾ ಕ್ಷೇತ್ರದ ಸದಸ್ಯರುಗಳು ನಿಗಮದ ಸಿಬ್ಬಂದಿಗಳ ಅಂತರ ಘಟಕ ದಿಂದ / ಅಂತರ ವಿಭಾಗಗಳಿಂದ ವರ್ಗಾವಣೆ ಕೋರಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕ,ರವರು ಹಾಗೂ ಮಾನ್ಯ ನಿರ್ದೇಶಕ ರು (ಸಿ &ಜಾ) ರವರಿಗೆ ದೂರವಾಣಿ ಮೂಲಕ ಕರೆ ಮಾಡಿ ಸಿಬ್ಬಂದಿಗಳ ಅಹವಾಲನ್ನು ನಿಯಮಾನುಸಾರ ಪರಿಗಣಿಸಲು ಕೋರುವುದು ಸಾಮಾನ್ಯ, ಆದರೆ ಇದನ್ನೇ ದುರ್ಬಳಕೆ ಮಾಡಿಕೊಂಡು ವ್ಯಕ್ತಿಯೊಬ್ಬ ವಂಚಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಘಟನೆ ಹಿನ್ನೆಲೆ
ದಿನಾಂಕ 28.10.2022 ರಂದು ವ್ಯವಸ್ಥಾಪಕ ನಿರ್ದೇಶಕ ರವರ ಮೊಬೈಲ್ ಸಂಖ್ಯೆ ಗೆ ವ್ಯಕ್ತಿಯೊಬ್ಬ ಕರೆ ಮಾಡಿ ʼನಾನು ನಾಗೇಂದ್ರ, ಎಂ ಎಲ್ ಎ, ಮೈಸೂರು ವಿಧಾನ ಸಭಾ ಕ್ಷೇತ್ರ, ಮಾತಾನಾಡುತ್ತಿರುವುದು, ಬಾಲರಾಜ್ ಚಾಲಕ ಕಮ್ ನಿರ್ವಾಹಕ ಬಿ ಸಂಖ್ಯೆ 2658 ರವರನ್ನು ಕೌಟಂಬಿಕ ಕಾರಣ ಮಂಡ್ಯ ಘಟಕದಿಂದ ಮಳವಳ್ಳಿ ಘಟಕ ಕ್ಕೆ ವರ್ಗಾವಣೆ ಮಾಡಿಕೊಡಿʼ ಎಂದು ಕೋರಿರುತ್ತಾರೆ. ಸದರಿ ಮನವಿಯ ಬಗ್ಗೆ ಪರಿಶೀಲಿಸಲು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಮಂಡ್ಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ರವರಿಗೆ ಸೂಚಿಸಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿ, ಮಂಡ್ಯ, ರವರು ಮೈಸೂರಿನ ಮಾನ್ಯ ವಿಧಾನ ಸಭಾ ಸದಸ್ಯರಾದ ನಾಗೇಂದ್ರ ರವರ ಹತ್ತಿರ ಮಾತನಾಡಿದಾಗ, ಶಾಸಕರು ಅಂತಹ ಕರೆಯನ್ನು ತಾವು ವ್ಯವಸ್ಥಾಪಕ ನಿರ್ದೇಶಕ, ರವರಿಗೆ ಮಾಡಿರುವುದಿಲ್ಲ ಎಂದು ತಿಳಿಸಿದ್ದು, ಈ ಬಗ್ಗೆ ಮಂಡ್ಯ ಘಟಕದ ಚಾಲನಾ ಸಿಬ್ಬಂದಿ, ಬಾಲ ರಾಜು ರವರನ್ನು ವಿಚಾರಿಸಿ, ಮೊಬ್ಯೆಲ್ ಸಂಖ್ಯೆ ತಿಳಿಸಿ, ಕರೆ ಮಾಡಿದ ವ್ಯಕ್ತಿಯ ಬಗ್ಗೆ ಕೇಳಿದಾಗ ಬಾಲರಾಜ್ ಚಾಲಕ ಕಮ್ ನಿರ್ವಾಹಕ ರವರು ಮಾನ್ಯ ವ್ಯವಸ್ಥಾಪಕ ನಿರ್ದೇಶಕ ರವರಿಗೆ ಕರೆ ಮಾಡಿದ ವ್ಯಕ್ತಿ ತಮಗೆ ತಿಳಿದ ಪುನೀತ್ , ಅಗಸನ ಪುರ , ಮಳವಳ್ಳಿ ತಾಲ್ಲೂಕು, ಎಂಬುವವರಿಗೆ ಸೇರಿದ್ದಾಗಿರುವುದಾಗಿ, ಅವರು ಕರಾರಸಾ ನಿಗಮದ ಕೇಂದ್ರ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ, ತಮ್ಮ ವರ್ಗಾವಣೆಯನ್ನು ಮಾನ್ಯ ವ್ಯವಸ್ಥಾಪಕ ನಿರ್ದೇಶಕ, ರವರಿಂದ ಮಾಡಿಸುವುದಾಗಿ ಪುನೀತ್ ,ರವರೇ ನನಗೆ ತಿಳಿಸಿರುವುದಾಗಿ ಮಾಹಿತಿ ನೀಡಿರುತ್ತಾರೆ. ನಿಗಮದ ನಿರ್ದೇಶಕರು (ಸಿ ಮತ್ತು ಜಾ) ರವರೂ ಸಹ ಈ ಬಗ್ಗೆ ವಿಷಯ ತಿಳಿದಾಗ, ತಮ್ಮ ದೂರವಾಣಿ ಸಂಖ್ಯೆಗೂ ಸಹ ಸದರಿ ವ್ಯಕ್ತಿಯ ಮೊಬೈಲ್ ಸಂಖ್ಯೆ ಇಂದ ಮೈಸೂರಿನ ವಿಧಾನ ಸಭಾ ಸದಸ್ಯರಾದ ನಾಗೇಂದ್ರ ಎಂದು ಹಲವಾರು ಸಿಬ್ಬಂದಿಗಳ ವರ್ಗಾವಣೆ ಕುರಿತು ಕರೆ ಮಾಡಿ, ವಾಟ್ಸಆಪ್ ಮೂಲಕ ಮನವಿಗಳನ್ನು ಕಳುಹಿಸಿರುವುದಾಗಿ ತಿಳಿಸಿರುತ್ತಾರೆ.
ಕೂಡಲೇ ಈ ವಿಷಯದ ಬಗ್ಗೆ ನಿಗಮದ ಭದ್ರತಾ ಮತ್ತು ಜಾಗೃತಾ ಇಲಾಖೆಯು ಕಾರ್ಯ ಪ್ರವೃತ್ತರಾಗಿ ಮಂಜುನಾಥ್ ಕರಡಿಗುಡ್ಡ, ಕೆ ಎಸ್ ಟಿ ಕಾನ್ಸಟೇಬಲ್, ದಾವಣಗೆರೆ ವಿಭಾಗ, ಗೋಪಾಲ ಗೌಡ ಬಿ ಸಿ, ಚಾಲಕ ಕಂ ನಿರ್ವಾಹಕ ಬಿಲ್ಲೆ ಸಂ 6240 , ಘಟಕ 5, ಬೆಂಗಳೂರು ಕೇಂದ್ರ ವಿಭಾಗ, ಬಾಲರಾಜ್ , ಚಾಲಕ ಕಂ ನಿರ್ವಾಹಕ ರವರುಗಳನ್ನು ಪ್ರಾಥಮಿಕ ವಿಚಾರಣೆ ನಡೆಸಿ ಸಾಕ್ಷಿ ಸಂಗ್ರಹಿಸಿ, ನಿಗಮದ ಸಿಬ್ಬಂದಿಗಳಿಗೆ ಕೆ.ಎಸ್.ಆರ್.ಟಿ.ಸಿ ನೌಕರನೆಂದು ಸುಳ್ಳು ಹೇಳಿ ಕೊಂಡು, ವರ್ಗಾವಣೆ ಮಾಡಿಕೊಡುವುದಾಗಿ ಭರವಸೆ ನೀಡಿ, ಎಂ.ಎಲ್.ಎ ಎಂಬ ಸಾರ್ವಜನಿಕ ಪ್ರತಿನಿಧಿ ಸೋಗಿನಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಕರು (ಸಿ ಮತ್ತು ಜಾ) ರವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ವಂಚಿಸಿರುವ ಪುನೀತ್ , ಅಗಸನ ಪುರ ಮಳವಳ್ಳಿ ತಾಲ್ಲೂಕು ರವರ ವಿರುದ್ಧ ವಿಲ್ಸನ್ ಗಾರ್ಡನ್ ಪೋಲಿಸ್ ಠಾಣೆಗೆ ಶಿವಪ್ರಕಾಶ್, ಹೆಚ್ ಬಿ., ಭದ್ರತಾ ಮತ್ತು ಜಾಗೃತಾಧಿಕಾರಿ, ರವರು ನೀಡಿದ ದೂರಿನನ್ವಯ ಮೊಕದ್ದಮೆ ಸಂಖ್ಯೆ 234/2022 ಕಲಂ 419, 420 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಪೋಲಿಸರು ಪುನೀತ್, ರವರನ್ನು ಬಂಧಿಸಿ ಮುಂದಿನ ತನಿಖೆ ಕ್ಯೆಗೊಂಡಿರುತ್ತಾರೆ.
BREAKING NEWS : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣ : ಮೂವರು ಆರೋಪಿಗಳಿಗೆ ನ.15 ರವರೆಗೆ ನ್ಯಾಯಾಂಗ ಬಂಧನ