ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸರಿಂದ ತನಿಖೆ ಚುರುಕುಗೊಂಡಿದ್ದು, ಶನಿವಾರ ಮೂರು ಆರೋಪಿಗಳನ್ನು ಮಾಗಡಿಯ ಒಂದನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾದೀಶರು ನವೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಶನಿವಾರ ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಎ1 ಆರೋಪಿ ಕಣ್ಣೂರು ಮಠದ ಡಾ. ಮೃತ್ಯುಂಜಯ ಸ್ವಾಮೀಜಿ, ಎ2 ಆರೋಪಿ ನೀಲಾಂಬಿಕೆ ಹಾಗೂ ಎ3 ಆರೋಪಿ ಮಹದೇವಯ್ಯರ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದರು. ನ್ಯಾಯಾದೀಶರು ನವೆಂಬರ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಮೃತ್ಯುಂಜಯಶ್ರೀ ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ಒಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಡಾ. ಮೃತ್ಯುಂಜಯಶ್ರೀ ತಪ್ಪೊಪ್ಪಿಕೊಂಡಿದ್ದಾರೆ, ಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ ಸ್ವಾಮೀಜಿಗಳು ತಪ್ಪೊಪ್ಪಿಕೊಂಡಿದ್ದಾರೆ. 3 ದಿನದಿಂದ ಮೃತ್ಯುಂಜಯಶ್ರೀ ವಿಚಾರಣೆಯನ್ನು ಮಾಗಡಿ ಪೊಲೀಸರು ಮಾಡುತ್ತಿದ್ದಾರೆ. ಮಾಗಡಿ ಪೊಲೀಸರ ವಿಚಾರಣೆ ವೇಳೆ ಸ್ವಾಮೀಜಿ ಮಾಡಿದ್ದ ತಪ್ಪೊಪ್ಪಿಕೊಂಡಿದ್ದಾರೆ. ಬೇರೆ ಸ್ವಾಮೀಜಿಗಳನ್ನು ಟಾರ್ಗೆಟ್ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ. ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ2 ನೇ ಆರೋಪಿ ನೀಲಾಂಬಿಕೆ ಮೊಬೈಲ್ ಆಟಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. ಈಕೆ ಮೊಬೈಲ್ ಫೋನ್ ಬಗ್ಗೆ ಅಪಾರ ಜ್ಞಾನಹೊಂದಿದ್ದಾಳೆ. ನೀಲಾಂಬಿಕೆ ಆಲಿಯಾಸ್ ಚಂದು ಮೊಬೈಲ್ ಜ್ಞಾನಕ್ಕೆ ಪೊಲೀಸರೇ ಶಾಕ್ ಆಗಿದ್ದಾರೆ. 6 ತಿಂಗಳಿಂದ ಮೊಬೈಲ್ ಡೇಟಾ ಡಿಲೀಟ್ ನೀಲಾಂಬಿಕೆ ಮಾಡಿದ್ದಾಳೆ. ವಿಡಿಯೋ ಚಿತ್ರೀಕರಿಸಿದ ಮೊಬೈಲ್ ನಾಶಪಡಿಸಿರುವ ಅನುಮಾನ ವ್ಯಕ್ತವಾಗಿದೆ. ಪ್ರಸ್ತುತ ಹೊಸ ಮೊಬೈಲ್ ಉಪಯೋಗಿಸುತ್ತಿದ್ದ ಅನುಮಾನ ವ್ಯಕ್ತವಾಗಿದೆ. ವಿಚಾರಣೆ ವೇಳೆ ಪೊಲೀಸರನ್ನೇ ನೀಲಾಂಬಿಕೆ ಆಟವಾಡಿಸುತ್ತಿದ್ದಾಳೆ.
BIG NEWS: ‘ಜನ ಗಣ ಮನ, ವಂದೇ ಮಾತರಂ’ಗೆ ಸಮಾನ ಸ್ಥಾನಮಾನ: ಕೇಂದ್ರ ಸರ್ಕಾರ ಹೈಕೋರ್ಟ್ಗೆ ಸ್ಪಷ್ಟೀಕರಣ