ಶಿವಮೊಗ್ಗ: ನಗರದಲ್ಲಿ ಗಂಡ-ಹೆಂಡತಿ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
BIGG NEWS: ಇಡಿಯಿಂದ ಮತ್ತೆ ನೋಟಿಸ್: ಒಂದೇ ವಿಚಾರಕ್ಕೆ ಎರಡು ಪ್ರಕರಣ ದಾಖಲು: ಡಿ.ಕೆ ಶಿವಕುಮಾರ್
50 ವರ್ಷದ ಶೋಭ ಕೊಲೆಯಾದ ಮಹಿಳೆ. ಪ್ರಕಾಶ ಎಂಬಾತ ತನ್ನ ಹೆಂಡತಿ ಶೋಭರನ್ನು ಕೊಲೆ ಮಾಡಿದ್ದಾನೆ. ಇಂದು ಬೆಳಗ್ಗೆ ಪ್ರಕಾಶ್, ಶೋಭಾಗೆ ರಾಡಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿ, ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆರೋಪಿ ಪ್ರಕಾಶ್ ನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಾವು ಹಿಡಿಯುವ ಕೆಲಸ ಮಾಡುತ್ತಿದ್ದ ಆತ, ಸ್ನೇಕ್ ಪ್ರಕಾಶ್ ಎಂದೇ ಚಿರಪರಿಚಿತನಾಗಿದ್ದ.
BIGG NEWS: ಇಡಿಯಿಂದ ಮತ್ತೆ ನೋಟಿಸ್: ಒಂದೇ ವಿಚಾರಕ್ಕೆ ಎರಡು ಪ್ರಕರಣ ದಾಖಲು: ಡಿ.ಕೆ ಶಿವಕುಮಾರ್
ಶೋಭಾ ದುಮ್ಮಳ್ಳಿಯಲ್ಲಿ ಹಾಲಿನ ಅಂಗಡಿ ನಡೆಸುತ್ತಿದ್ದರು. ಪತಿಯೊಂದಿಗೆ ಸಂಸಾರದಲ್ಲಿ ಸರಿಬಾರದ ಕಾರಣ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಬ್ಬರ ನಡುವಿನ ವೈಮನಸ್ಸಿನಲ್ಲಿ ಶೋಭಾ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ದೂರು ವಾಪಸ್ ತೆಗೆದುಕೊಳ್ಳುವಂತೆ ಪತಿ ಅನೇಕ ಬಾರಿ ಪತ್ನಿಗೆ ಎಚ್ಚರಿಕೆ ನೀಡಿದ್ದ. ಮಾತು ಕೇಳದ ಹಿನ್ನೆಲೆಯಲ್ಲಿ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.