ನವದೆಹಲಿ: ಇಂದು ಯುಜಿಸಿ- ನೆಟ್ ಫಲಿತಾಂಶ ಪ್ರಕಟವಾಗಕಲಿದೆ. ನೆಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗಳಾದ nta.ac.in ಮತ್ತು ugcnet.nta.nic.inಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.
ಇಂದು ನೆಟ್ ಫಲಿತಾಂಶ ಬಿಡುಗಡೆಯಾಗಲಿದ್ದು, ಈ ಬಗ್ಗೆ ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. “ಯುಜಿಸಿ- ನೆಟ್ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನವೆಂಬರ್ 5ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶಗಳು NTA ವೆಬ್ಸೈಟ್ https://nta.ac.in#UGC-NET ನಲ್ಲಿ ಲಭ್ಯವಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಜುಲೈ 9ರಿಂದ 12ರವರೆಗೆ ಮೊದಲ ಹಂತದ ನೆಟ್ ಪರೀಕ್ಷೆಯ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು. UGC NET 2022 ಪರೀಕ್ಷೆಯ 3ನೇ ಹಂತ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ನಡೆದಿತ್ತು. 4ನೇ ಹಂತ ಅಕ್ಟೋಬರ್ 8, 10, 11, 12, 13, ಮತ್ತು 14ರಂದು ನಡೆದಿತ್ತು.