ಬೆಂಗಳೂರು: ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರು ಕೊಲೆ ಮಾಡಿದ ಆರೋಪಿಗಳನ್ನು ತೀವ್ರ ಶೋಧ ನಡೆಸಿ ಬಂಧಿಸಬೇಕು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ( Sri Ram Sene founder president Pramod Muthalik ) ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್ ಶಾಸಕ ರೇಣುಕಾಚಾರ್ಯ ಕುಟುಂಬದಲ್ಲಿ ಕರಾಳ ಘಟನೆ ನಡೆದಿದೆ. ಮಗ ಚಂದ್ರು ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಹಿಂದೂ ಶಾಸಕರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವ ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಮೋದ್ ಮುತಾಲಿಕ್ ಗೆ ಕೊಲೆ ಬೆದರಿಕೆ
ನಿನ್ನೆ ರಾತ್ರಿ ನಾಲ್ಕು ನಂಬರ್ ಗಳಿಂದ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿದ್ದಾಗ ಕೊಲೆ ಬೆದರಿಕೆ ಕರೆಗಳು ( Death threat call ) ಬಂದಿದ್ದಾವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿದಂತವರು ಉರ್ದು ಮಿಶ್ರಿತ ಮಂಗಳೂರು ಭಾಷೆಯಲ್ಲಿ ಮಾತನಾಡುತ್ತಿದ್ದರು. ಇಂದು ಬೆಳಿಗ್ಗೆಯೂ ಕೊಲೆ ಬೆದರಿಕೆ ಕರೆ ಬಂದಿವೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು. ಈ ತರದ ಕೊಲೆ ಬೆದರಿಕೆ ಎಷ್ಟೋ ಬಂದಿದ್ದಾವೆ. ನಾನು ಕೊಲೆ ಬೆದರಿಕೆಗೆ ಹೆದರೋದಿಲ್ಲ. ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
BIGG NEWS ; ‘ಪ್ಲಾಟ್ ಫಾರ್ಮ್ ಟಿಕೆಟ್’ ದರ ನಿರ್ಧರಿಸುವ ‘DRM’ಗಳ ಅಧಿಕಾರ ಹಿಂತೆಗೆದುಕೊಂಡ ರೈಲ್ವೆ ಸಚಿವಾಲಯ
BIGG BREAKING NEWS : ಬೀದರ್ ನಲ್ಲಿ ಭೀಕರ ಅಪಘಾತ : ಆಟೋಗೆ ಟ್ರಕ್ ಡಿಕ್ಕಿಯಾಗಿ ಐವರು ಮಹಿಳೆಯರ ದಾರುಣ ಸಾವು