ಬೀದರ್ : ಆಟೋಗೆ ಟ್ರಕ್ ಡಿಕ್ಕಿಯಾಗಿ ಐವರು ಮಹಿಳೆಯರು ದಾರುಣವಾಗಿ ಮೃತಪಟ್ಟ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮ್ಮಳಬೇಡದಲ್ಲಿ ನಡೆದಿದೆ.
ಟ್ರಕ್ ಗೆ ಆಟೋ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟು, ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ರಭಸವಾಗಿ ಬಂದ ಟ್ರಕ್ ಆಟೋಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತರನ್ನು ಪ್ರಭಾವತಿ, ಗುಂಡಮ್ಮ, ಜಕ್ಕಮ್ಮ, ರಾಧಮ್ಮ, ರುಕ್ಮಣಿ ಎಂದು ಗುರುತಿಸಲಾಗಿದೆ, ಅಪಘಾತದಲ್ಲಿ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಟ್ರಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಪಾಲಿಕೆ ಸದಸ್ಯರಿಗೆ ಸಿಎಂ ಬೊಮ್ಮಾಯಿ ಸನ್ಮಾನ
BIGG NEWS : ‘ಹೊನ್ನಾಳಿ ಚಂದ್ರಶೇಖರ್’ ಸಾವು ಪ್ರಕರಣ : ತಂದೆ ರಮೇಶ್ ದೂರಿನ ಮೇರೆಗೆ ‘FIR’ ದಾಖಲು