ದಾವಣಗೆರೆ : ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅಂತ್ಯಕ್ರಿಯೆ ಇಂದು ಸ್ವಗ್ರಾಮ ಕುಂದೂರಿನ ತೋಟದಲ್ಲಿ ನೆರವೇರಿತು.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ತೋಟದಲ್ಲಿ ಚಂದ್ರಶೇಖರ್ ಅಂತ್ಯಕ್ರಿಯೆ ನೆರವೇರಿದ್ದು, ಚಂದ್ರಶೇಖರ್ ಮಣ್ಣಲ್ಲಿ ಮಣ್ಣಾದರು.
ಈ ವೇಳೆ ಶಾಸಕ ರೇಣುಕಾಚಾರ್ಯ, ಹಾಗೂ ಕುಟುಂಬದವರು, ಗೃಹ ಸಚಿವ ಆರಗ ಜ್ಞಾನೇಂದ್ರ, ಹೊನ್ನಾಳಿ ಹಿರೇಕಲ್ಮಠದ ಡಾ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಚಂದ್ರಶೇಖರ್ ಪಾರ್ಥೀವ ಶರೀರಕ್ಕೆ ಪೂಜೆ ಸಲ್ಲಿಸಿದ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ನಿಂತು ಭಾವುಕ ಮನಸ್ಸಿನಿಂದಲೇ ಸಾವಿರಾರು ಜನರು ದರ್ಶನ ಪಡೆದರು. ಹೊನ್ನಾಳಿ ಪಟ್ಟಣದ ಶಾಸಕ ರೇಣುಕಾಚಾರ್ಯರ ಮನೆಯಲ್ಲಿ ಚಂದ್ರಶೇಖರ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಿರೇಕಲ್ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಪೂಜೆ ನೆರವೇರಿಸಿದರು. ಈ ವೇಳೆ ಚಂದ್ರು ಚಂದ್ರು ಅಂತಾ ರೇಣುಕಾಚಾರ್ಯರು ಬಿಕ್ಕಿ ಬಿಕ್ಕಿ ಅತ್ತರು.
ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾಗಿದ್ದರು. ನಂತರ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿತ್ತು, ಚಂದ್ರಶೇಖರ್ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಕಾರಿನ ಹಿಂಬದಿ ಸೀಟ್ ನಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಕಾರಿನ ಹಿಂಬದಿ ಸೀಟಿಗೆ ಚಂದ್ರಶೇಖರ್ ಶವ ಹೇಗೆ ಬಂತು..ಇದು ಆತ್ಮಹತ್ಯೆಯೋ..ಕೊಲೆಯೋ ಎಂಬುದು ಗೊತ್ತಾಗಿಲ್ಲ. ಕಳೆದ ಐದು ದಿನಗಳಿಂದ ನಾಪತ್ತೆಯಾದ ಚಂದ್ರಶೇಖರ್ ಸಾವಿಗೆ ಕಾರಣವೇನು..? ಅವರಾಗಿಯೇ ಆತ್ಮಹತ್ಯೆ ಮಾಡಿಕೊಂಡರಾ..ಅಥವಾ ಯಾವುದಾದರೂ ವೈಷ,ಮ್ಯದ ಹಿನ್ನೆಲೆ ಚಂದ್ರಶೇಖರ್ ರನ್ನು ಕೊಲೆ ಮಾಡಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಅದೇನೆ ಇರಲಿ ಪೊಲೀಸ್ ತನಿಖೆಯಿಂದಲೇ ಚಂದ್ರಶೇಖರ್ ಸಾವಿನ ರಹಸ್ಯ ಗೊತ್ತಾಗಬೇಕಿದೆ.
EPFO ಖಾತೆದಾರರಿಗೆ ಸಿಹಿ ಸುದ್ದಿ, ನಿಮ್ಮ ಖಾತೆಗೆ ಬಡ್ಡಿ ಜಮಾ ಪ್ರಕ್ರಿಯೆ ಶುರು: ಈ ರೀತಿ ಚೆಕ್ ಮಾಡಿ
ಟಿಕೆಟ್ ಆಕಾಂಕ್ಷಿಗಳಿಂದ ‘ಡಿಕೆಶಿ’ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ : ಬಿಜೆಪಿ ವಾಗ್ಧಾಳಿ