ಮಂಗಳೂರು : ಕರ್ನಾಟಕದಲ್ಲಿ ಇತ್ತೀಚೆಗೆ ಸಣ್ಣ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕುಂಟಿನಾಕ ಗ್ರಾಮದ 2ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿಯನ್ನು ಮೋಕ್ಷಿತ್ (7) ಎಂದು ಗುರುತಿಸಲಾಗಿದೆ. ಈತ ಕುಕ್ಕುಜಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈತ ಓದುತ್ತಿದ್ದ. ಶಾಲೆಗೆ ಬಂದಿದ್ದ ಬಾಲಕನಿಗೆ ಹಣೆ ಬಿಸಿಯಾಗಿತ್ತು. ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಶಿಕ್ಷಕರು ಪೋಷಕರನ್ನು ಶಾಲೆಗೆ ಕರೆಸಿದರು.
BIGG NEWS : ನ.8 ರಂದು ಚಂದ್ರಗ್ರಹಣ : ತಿರುಮಲ ದೇವಸ್ಥಾನ 12 ಗಂಟೆಗಳ ಕಾಲ ಮುಚ್ಚಲು ನಿರ್ಧಾರ | Lunar Eclipse 2022
ತಂದೆ ಎದುರು ಮೋಕ್ಷಿತ್ ಕುಸಿದುಬಿದ್ದ. ತಕ್ಷಣ ಮಗನನ್ನು ಎತ್ತಿಕೊಂಡು ಅವರು ಸುಳ್ಯ ಪಟ್ಟಣದ ಖಾಸಗಿ ಆಸ್ಪತ್ರೆಗೆ ತೆರಳಿದರು. ಮಗುವಿನ ದೇಹ ಲಕ್ಷಣ ಪರಿಶೀಲಿಸಿದ ವೈದ್ಯರು ಬಾಲಕನಿಗೆ ಹೃದಯಾಘಾತವಾಗಿದೆ. ಮೃತಪಟ್ಟಿದ್ದಾನೆ ಎಂದು ಹೇಳಿದ್ದರು. ಈ ಪ್ರಕರಣದ ಮತ್ತಷ್ಟು ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
BIGG NEWS : ನ.8 ರಂದು ಚಂದ್ರಗ್ರಹಣ : ತಿರುಮಲ ದೇವಸ್ಥಾನ 12 ಗಂಟೆಗಳ ಕಾಲ ಮುಚ್ಚಲು ನಿರ್ಧಾರ | Lunar Eclipse 2022
ಮಕ್ಕಳಲ್ಲಿ ಇತ್ತೀಚೆಗೆ ಹೃದಯಘಾತ ಹೆಚ್ಚಾಗುತ್ತಿರುವುದು ಆತಂಕ ಉಂಟು ಮಾಡಿದೆ. ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಹೃದಯಾಘಾತದಿಂದ 9ನೇ ತರಗತಿಯ ಬಾಲಕಿ ವೈಷ್ಣವಿ (14) ಮೃತಪಟ್ಟಿದ್ದರು. ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ 13 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಳು. 8ನೇ ತರಗತಿಯಲ್ಲಿ ಓದುತ್ತಿದ್ದ ಅನುಶ್ರೀ, ಮನೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದಳು, ಆಸ್ಪತ್ರೆಗೆ ಕರೆದೊಯ್ಯುವ ಮೊದಲೇ ಇಹಲೋಕ ತ್ಯಜಿಸಿದ್ದಳು.
BIGG NEWS : ನ.8 ರಂದು ಚಂದ್ರಗ್ರಹಣ : ತಿರುಮಲ ದೇವಸ್ಥಾನ 12 ಗಂಟೆಗಳ ಕಾಲ ಮುಚ್ಚಲು ನಿರ್ಧಾರ | Lunar Eclipse 2022
ಮಕ್ಕಳಲ್ಲಿ ಹೃದಯಾಘಾತಕ್ಕೆ ಏನು ಕಾರಣ
ದೇಹದಲ್ಲಿ ರಕ್ತದ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇದರಿಂದ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೊರೊನಾ ಸಮಯದಲ್ಲಿ ಪ್ರಪಂಚಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು, ಮಕ್ಕಳು ಆಟವಾಡುವುದನ್ನೂ ನಿಲ್ಲಿಸಿದ್ದರು, ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್ಟಾಪ್ ಮುಂದೆ ಕೂತು ಏನಾದರೂ ತಿನ್ನುತ್ತಿದ್ದರು. ಒಂದೇ ಜಾಗದಲ್ಲಿ ದಿನಪೂರ್ತಿ ಕುಳಿತಿದ್ದರೆ ಹೃದ್ರೋಗದ ಅಪಾಯ ಹೆಚ್ಚು. ಈಗಿನ ಮಕ್ಕಳು ಮೊಬೈಲ್ ಫೋನಿನ ಚಟಕ್ಕೆ ಬಿದ್ದಿದ್ದಾರೆ ಅಂದರೆ ಅದಕ್ಕೆ ಅಡಿಕ್ಟ್ ಆಗಿದ್ದು ಅವರ ಮನಸ್ಸನ್ನು ದುರ್ಬಲಗೊಳಿಸುತ್ತಿದೆ.
ಬೊಜ್ಜಿನ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗಬಹುದು. ಹಾಗಾಗಿ ಪೋಷಕರು ಮಕ್ಕಳ ಈ ಎಲ್ಲಾ ಅಭ್ಯಾಸಗಳತ್ತ ಗಮನ ಹರಿಸಿ ಅವರೊಂದಿಗೆ ಸಮಯ ಕಳೆಯಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ.
BIGG NEWS : ನ.8 ರಂದು ಚಂದ್ರಗ್ರಹಣ : ತಿರುಮಲ ದೇವಸ್ಥಾನ 12 ಗಂಟೆಗಳ ಕಾಲ ಮುಚ್ಚಲು ನಿರ್ಧಾರ | Lunar Eclipse 2022