ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಮೃತದೇಹವು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಇದೀಗ ಕುಂದೂರಲ್ಲಿ ಚಂದ್ರಶೇಖರ್ ಅಂತಿಮ ದರ್ಶನವನ್ನು ಮಾಜಿ ಸಿಎಂ ಯಡಿಯೂರಪ್ಪ ಪಡೆದಿದ್ದಾರೆ.
BIGG NEWS: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದೊಳಗಿನ ಹೆದ್ದಾರಿ ಯೋಜನೆ ಮುಂದೂಡಿದ ವನ್ಯಜೀವಿ ಮಂಡಳಿ
ಈ ವೇಳೆ ಅವರು ಮಾತನಾಡಿದ ಅವರು, ಚಂದ್ರಶೇಖರ್ ಗೆ ಇಂತಹ ಸಾವು ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಈ ಪ್ರಕರಣದ ಸೂಕ್ತ ತನಿಖೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ತನಿಖೆ ನಂತರ ತಪ್ಪಿಸ್ಥರು ಯಾರೆಂದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ
ಚಂದ್ರ ಕಿಡ್ಯ್ನಾಪ್ ಆಗಿದೆ ಎಂದು ರೇಣುಕಾಚಾರ್ಯ ಹೇಳಿದ್ದರು. ಆದರೆ ರೇಣುಕಾಚಾರ್ಯ ಹೇಳಿಕಯನ್ನು ನಾವು ಮೊದಲು ನಂಬಿರಲಿಲ್ಲ. ಚಂದ್ರ ಶವ ನೋಡಬೇಕಾಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಹೊನ್ನಾಳಿಯಲ್ಲಿ ಬಿಎಸ್ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.