ಬೆಂಗಳೂರು : ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಾಜ್ಯ ಹೂಡಿಕೆ ಪ್ರಾಧಿಕಾರ ರಚನೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಬಗ್ಗೆ ತಿದ್ದುಪಡಿ ಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಣಯ ಕೈಗೊಳ್ಳಲಾಗಿದೆ.
SHOCKING NEWS: ಆಟವಾಡುತ್ತಿದ್ದಾಗ ಕಚ್ಚಿದ ವಿಷಪೂರಿತ ಹಾವನ್ನು ತನ್ನ ಬಾಯಿಂದಲೇ ಕಚ್ಚಿ ಸಾಯಿಸಿದ ಬಾಲಕ
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ತಿದ್ದುಪಡಿ ತರಲಾಗುವುದು. ಮುಂದಿನ ಸಂಪುಟ ಸಭೆಗೆ ಈ ವಿಷಯ ಬರಲಿದೆ. ಬಂಡವಾಳ ಹೂಡಿಕೆದಾರರಿಗೆ ಹಲವು ಅಡೆತಡೆಗಳನ್ನು ತಪ್ಪಿಸಲು ನಿಯಮಗಳನ್ನು ಸರಳೀಕರಣ ಮಾಡಿ ಒಂದೇ ಪ್ರಾಧಿಕಾರದ ಅವಧಿಯಲ್ಲಿ ತರಲು ಉದ್ಏಶಿಸಲಾಗಿದೆ ಜೊತೆಗೆ ಗ್ರಾಮ ಪಂಚಾಯಿತಿ ಸೇರಿ ಎಲ್ಲ ಸ್ಥಳೀಯ ಸಂಸ್ಥೆಗಳ ಒಪ್ಪಿಗೆ, ಲೈಸೆನ್ಸ್ ಇತ್ಯಾದಿ ಸೇರಿ ಈ ಪ್ರಾಧಿಕಾರವೇ ನಿಭಾಯಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
BIG NEWS : ʻಇಸ್ರೇಲ್ʼ ಪ್ರಧಾನಿಯಾಗಿ ಆಯ್ಕೆಯಾದ ʻಬೆಂಜಮಿನ್ ನೆತನ್ಯಾಹುʼರನ್ನು ಅಭಿನಂದಿಸಿದ ಪಿಎಂ ಮೋದಿ
ಇನ್ನು ಕಂದಾಯ ಮತ್ತು ತೆರಿಗೆಯನ್ನು ಈ ಪ್ರಾಧಿಕಾರವೇ ನಿಭಾಯಿಸಲಿದ್ದು, ಸಂಗ್ರಹವಾದ ತೆರಿಗೆಯ ಶೇ. 30 ರಷ್ಟು ಹಣವನ್ನು ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂಬ ನಿಯಮವನ್ನು ಕಾಯ್ದೆಯಲ್ಲಿ ತರಲಾಗುವುದು ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.