ಜಮ್ಮು ಮತ್ತು ಕಾಶ್ಮೀರ: ಅನಂತನಾಗ್ ಜಿಲ್ಲೆಯ ಬೊಂಡಿಯಾಲ್ಗಾಮ್ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ಇಬ್ಬರು ಕಾರ್ಮಿಕರು ಬೇರೆ ರಾಜ್ಯದವರಾಗಿದ್ದಾರೆ. ಒಬ್ಬರು ಬಿಹಾರ ಮತ್ತು ಇನ್ನೊಬ್ಬರು ನೇಪಾಳದವರು. ಸ್ಥಳೀಯರಲ್ಲದವರಿಗೆ ಗಾಯಗಳಾಗಿದ್ದು, ಅವರನ್ನು ಅನಂತಬಾಗ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇತರ ರಾಜ್ಯಗಳ ಜನರಿಗೆ ಮತದಾನದ ಹಕ್ಕು ನೀಡುವ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿಯ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ಲಷ್ಕರ್-ಎ-ತೊಯ್ಬಾ ಬೆಂಬಲಿತ ಭಯೋತ್ಪಾದಕ ಗುಂಪು ಕಾಶ್ಮೀರ ಹೋರಾಟವು ಸ್ಥಳೀಯರಲ್ಲದವರ ಮೇಲೆ ದಾಳಿಯನ್ನು ತೀವ್ರಗೊಳಿಸುವ ಬೆದರಿಕೆ ಹಾಕಿದ ನಂತರ ಆಗಸ್ಟ್ನಿಂದ ಸ್ಥಳೀಯರ ಮೇಲೆ ದಾಳಿಗಳು ಹೆಚ್ಚಿವೆ.
#Terrorist fired upon two outside labourers (01 from Bihar & second from Nepal), who were working at a private SAPS school at #Bondialgam in #Anantnag district. Both of them are being shifted to hospital. Further details shall follow.@JmuKmrPolice
— Kashmir Zone Police (@KashmirPolice) November 3, 2022
ಅಕ್ಟೋಬರ್ 18 ರಂದು, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹರ್ಮನ್ ಪ್ರದೇಶದಲ್ಲಿ ಭಯೋತ್ಪಾದಕರು ಸ್ಥಳೀಯರಲ್ಲದವರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಆ ವೇಳೆ ಉತ್ತರ ಪ್ರದೇಶದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು.
ಅಕ್ಟೋಬರ್ 16 ರಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಅಪರಿಚಿತ ಭಯೋತ್ಪಾದಕರು ಇಬ್ಬರು ಸ್ಥಳೀಯರಲ್ಲದ ಕಾರ್ಮಿಕರನ್ನು ಹೊಡೆದುರುಳಿಸಿದ್ದರು. ಓರ್ವ ವ್ಯಕ್ತಿ ಗಾಯಗೊಂಡಿದ್ದನು.
ಅಕ್ಟೋಬರ್ 15 ರಂದು ಭಯೋತ್ಪಾದಕರು ನಡೆಸಿದ ಎರಡು ಬ್ಯಾಕ್ ಟು ಬ್ಯಾಕ್ ದಾಳಿಗಳಲ್ಲಿ ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಕಾರ್ಮಿಕ ಮೃತಪಟ್ಟರು. ಅದೇ ದಿನ ಮತ್ತೊಂದು ಭಯೋತ್ಪಾದಕ ದಾಳಿಯಲ್ಲಿ ಕಾಶ್ಮೀರಿ ಪಂಡಿತ್ ಶೋಪಿಯಾನ್ನಲ್ಲಿರುವ ಅವರ ನಿವಾಸದ ಹೊರಗೆ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದರು.