ಬೆಂಗಳೂರಿನಲ್ಲಿ : ಬೆಂಗಳೂರು ಸೇರಿ ರಾಜ್ಯದ ಹಲವು ಕಡೆ ಇಂದು ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ 14 ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಬೆಂಗಳೂರು ಗ್ರಾಮಾಂತರದ 4 ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವರ್ತೂರು. ನೆಲಮಂಗಲ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ ನಡೆದಿದೆ.
ವರ್ತೂರು, ಬೇಗೂರು, ದೊಡ್ಡಬಳ್ಳಾಪುರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೂ ದಾಳಿ ಮಾಡಿದ್ದು, ಲೋಕಾಯುಕ್ತ ಪೊಲೀಸರಿಂದ ಮಹತ್ವದ ದಾಖಲೆಗಳ ಸಂಗ್ರಹ ಮಾಡಲಾಗಿದೆ. ನೆಲಮಂಗಲದಲ್ಲೂ ಸಬ್ ರಿಜಿಸ್ಟರ್ ಕಛೇರಿ ಮೇಲೂ ಡಿವೈ ಎಸ್ಪಿ ಟಿ. ಸಿ. ವೆಂಕಟೇಶ್ ನೇತೃತ್ವದಲ್ಲಿ ದಾಳಿ ಮಾಡಿದ್ದು,. ಒಟ್ಟು 8 ಜನ ಸಿಬ್ಬಂದಿಯಿಂದ ಕಛೇರಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
BIGG NEWS ; ಪಾಕ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ ಮೇಲೆ ಗುಂಡಿನ ದಾಳಿ ; ಭಾರತ ‘ತೀವ್ರ ನಿಗಾ’ ವಹಿಸಿದೆ ; MEA
ನಿನ್ನ ಸಾವಿಗೆ ನಾನೇ ಕಾರಣನಾದೇ: ಅಣ್ಣನ ಮಗನ ಶವ ನೋಡಿ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ
ಕನ್ನಡ ಧ್ವಜದಲ್ಲಿ ‘ಪುನೀತ್’ ಫೋಟೋ ಹಾಕಿದ್ದಕ್ಕೆ ಮಹಿಳೆ ವಿರೋಧ : ‘ಅಪ್ಪು’ ಅಭಿಮಾನಿಗಳಿಂದ ಆಕ್ರೋಶ