ಹೊನ್ನಾಳಿ (ದಾವಣಗೆರೆ) : ನಿನ್ನ ಸಾವಿಗೆ ನಾನೇ ಕಾರಣನಾದೇ ಅಂತ ಅಣ್ಣನ ಮಗನ ಶವ ನೋಡಿ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಇಂದು ಕಳೆದ ನಾಲ್ಕು ದಿನಗಳ ಹಿಂದೆ ಕಾಣಿಯಾಗಿದ್ದ ರೇಣುಕಾಚಾರ್ಯರರ ಅಣ್ಣನ ಪುತ್ರ ಚಂದ್ರಶೇಖರ್ ಅವರ ಶವ ಇಂದು ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆ ಬಳಿಯಲ್ಲಿ ದೊರೆತಿದೆ.
ಇಂದು ಸಂಜೆ ಹೊತ್ತಿಗೆ ಕಾರೊಂದು ಕಾಲುವೆಯಲ್ಲಿ ಪತ್ತೆಯಾಗಿದೆ ಅನ್ನೋ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ಪೋಲಿಸರು ಆಗಮಿಸಿದ ವೇಳೆಯಲ್ಲಿ, ಕಾರನ್ನು ಕ್ರೈನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿತ್ತು. ಈ ವೇಳೆಯಲ್ಲಿ ಕಾರಿನ ಹಿಂಭಾಗದಲ್ಲಿ ಚಂದ್ರಶೇಖರ್ ಅವರ ಶವ ಪತ್ತೆಯಾಗಿದೆ. ಈ ನಡುವೆ ಕಾರನ್ನು ಮೇಲೆಕ್ಕೆ ಎತ್ತಿದ್ದ ವೇಳೆಯಲ್ಲಿ, ನಿನ್ನ ಸಾವಿಗೆ ನಾನೇ ಕಾರಣ. ಚಂದ್ರು.. ಚಂದ್ರು.. ಎಂದು ನನಗೆ ಮುಖ ತೋರಿಸಿ ನೋಡಬೇಕು ಅಂಥ ಕಣ್ಣಿರಿಟ್ಟ ಭಾವನತ್ಮಕ ಸನ್ನಿವೇಶ ಕಂಡು ಬಂತು.
ಇದೇ ವೇಳೆ ಚಂದ್ರಶೇಖರ್ ಶವ ಪತ್ತೆಯಾಗುತ್ತಿದ್ದಂತೆ ರೇಣುಕಾಚಾರ್ಯ ಆಕ್ರಂದನ ಮುಗಿಲು ಮುಟ್ಟಿದೆ. ನಿನ್ನ ಸಾವಿಗೆ ನಾನೇ ಕಾರಣ..ಚಂದ್ರು ಚಂದ್ರು ಎಂದು ಗೋಗರೆದಿದ್ದಾರೆ. ಯಾರು ಕೂಡ ಶವ ಎನ್ನಬೇಡಿ, ಚಂದ್ರು ಎಂದು ಕರೆಯಿರಿ, ನನ್ನ ಶವಕ್ಕೆ ನೀನು ಬೆಂಕಿ ಇಡಬೇಕಾಗಿತ್ತು, ಆದರೆ ನೀನೆ ಹೋಗಿಬಿಟ್ಟೆ,,ಎಂದು ಮಗನನ್ನು ಅಪ್ಪಿಕೊಂಡು ರೇಣುಕಾಚಾರ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.