ಜಾರ್ಖಂಡ್ : ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ ಸಿಎಂ ಹೇಮಂತ್ ಅವರು ಇಡಿಗೆ ಸವಾಲು ಹಾಕಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುರುವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ್ಕೆ ಸವಾಲು ಹಾಕಿರುವ ಅವರು, ನಾನು ಅಪರಾಧ ಮಾಡಿದ್ದರೆ ಬಂಧಿಸಿ, ಪ್ರಶ್ನಿಸಬೇಡಿ ಎಂದಿದ್ದಾರೆ.
ಸಮನ್ಸ್ನಿಂದ ಹೊರಗುಳಿದ ನಾಯಕನಿಗೆ ರಾಂಚಿಯ ಹಿನೂ ಪ್ರದೇಶದ ಪ್ರಾದೇಶಿಕ ಕಚೇರಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ ಅವರು ಹಾಜರಾಗಲಿಲ್ಲ.
#WATCH | I've been summoned by ED today when I already have a program in Chhattisgarh today. If I've committed a crime that big, come & arrest me. Why the questioning?… Security near ED office has increased. Why, are you scared of Jharkhandis?, says Jharkhand CM Hemant Soren pic.twitter.com/41cR92FCHM
— ANI (@ANI) November 3, 2022
ನಾನು ಈಗಾಗಲೇ ಇಂದು ಛತ್ತೀಸ್ಗಢದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ, ಇಡಿ ನನ್ನನ್ನು ಇಂದು ವಿಚಾರಣೆಗೆ ಕರೆದಿದೆ. ನಾನು ದೊಡ್ಡ ಅಪರಾಧ ಮಾಡಿದ್ದರೆ, ಬಂದು ನನ್ನನ್ನು ಬಂಧಿಸಿ. ಯಾಕೆ ಪ್ರಶ್ನೆ ಮಾಡುತ್ತೀರಾ, ಇಡಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಯಾಕೆ, ಜಾರ್ಖಂಡಿಗಳಿಗೆ ಹೆದರುತ್ತೀರಾ? ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥರು ಸಭೆಯಲ್ಲಿ ಹೇಳಿದ್ದಾರೆ.
ಪೂರ್ವ ರಾಜ್ಯವು ಜಾರ್ಖಂಡಿಗಳ ಆಳ್ವಿಕೆಯಿಂದ ಮಾತ್ರವೇ ಹೊರತು ಹೊರಗಿನವರಲ್ಲ. ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಳಿಸಿಹಾಕಲಾಗುವುದು
ರಾಜ್ಯದ ಆದಿವಾಸಿಗಳನ್ನು ತಮ್ಮ ಕಾಲ ಮೇಲೆ ನಿಲ್ಲಲು ಬಿಡದ ಕೆಲವು ಬಾಹ್ಯ ಗುಂಪುಗಳನ್ನು ನಾವು ರಾಜ್ಯದಲ್ಲಿ ಗುರುತಿಸಿದ್ದೇವೆ. ಈ ರಾಜ್ಯದಲ್ಲಿ ಜಾರ್ಖಂಡಿಗಳ ಆಡಳಿತವಿರುತ್ತದೆಯೇ ಹೊರತು ಬಾಹ್ಯ ಶಕ್ತಿಗಳಲ್ಲ.ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗಲಿದೆ ಎಂದು ಗುಡುಗಿದ್ದಾರೆ.
ಉದ್ಯೋಗಕಾಂಕ್ಷಿಗಳಿಗೆ ಸಿಹಿ ಸುದ್ದಿ: ಮುಂದಿನ ಮುಂದಿನ 5 ವರ್ಷಗಳಲ್ಲಿ ಟೆಕ್ ಮಹೀಂದ್ರದಿಂದ 20,000 ಜನರ ನೇಮಕ