ಚಿತ್ರದುರ್ಗ: ಎರಡನೇ ಪೋಕ್ಸೊ ಪ್ರಕರಣ ಪ್ರಕರಣದಲ್ಲಿ ಮುರಘಾ ಶ್ರೀಗಳಿಗೆ ಮತ್ತೆ ಜೈಲುವಾಸ ವಿಧಿಸಲಾಗಿದೆ. ಎರಡನೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸರು ಎಂಟು ದಿನಗಳ ಕಾಲತಮ್ಮ ವಶಕ್ಕೆ ಶ್ರೀಗಳನ್ನು ವಶಕ್ಕೆ ನೀಡಬೇಕು ಅಂತ ಮನವಿ ಮಾಡಿದ್ದರು, ಈ ವೇಳೆ ಪೋಲಿಸರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಅವರನ್ನು ಮೂರು ದಿನ (ಅಂದ್ರೆ ನವೆಂಬರ್ ಐದರ ತನಕ) ಪೋಲಿಸರ ಕಸ್ಟಡಿಗೆ ನೀಡುವುಂತೆ ಒಪ್ಪಿಗೆ ನೀಡಿದೆ. 2ನೇ ಅಪರ & ಜಿಲ್ಲಾ ನ್ಯಾಯಾಲಯ ಪ್ರಕರಣ ಸಂಬಂಧ ವಾದವಿವಾದವನ್ನು ಆಲಿಸಲಾಯಿತು.
ಪ್ರಕರಣದ ಹಿನ್ನಲೆ: ಮಹಿಳೆಯೊಬ್ಬರ ತನ್ನಿಬ್ಬರು ಮಕ್ಕಳ ಜೊತೆ ಇನ್ನಿಬ್ಬರು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯ ನಡೆದಿದೆ ಅಂತ ಮೈಸೂರಿನಲ್ಲಿ (Mysuru) ಪ್ರಕರಣವನ್ನ ಮಹಿಳೆಯೊಬ್ಬರು ದಾಖಲಿಸಿದ್ದರು. ಆರೋಪ ಕೇಳಿ ಬರುತ್ತಿದ್ದ ಹಾಗೇ ಚಿತ್ರದುರ್ಗ ಪೋಲಿಸರು ಖುದ್ದು ಮೈಸೂರಿಗೆ ತೆರಳಿ ಚಿತ್ರದುರ್ಗದ ಪೊಲೀಸರು, ಮಕ್ಕಳ ರಕ್ಷಣಾ ಸಮಿತಿಯ ಸಮ್ಮುಖದಲ್ಲಿ ಸಿಆರ್ಪಿಸಿ 161 ಅಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅದರ ತನಿಖೆಯನ್ನು ಈಗ ನಡೆಸಲಾಗುತ್ತದೆ.