ತೆಲಂಗಾಣ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ರುದ್ರಾರಾಮ್ನಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಾರಂಭಿಸಿದರು. ಈ ವೇಳೆ ಹಲವು ತೆಲಂಗಾಣ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಇನ್ನು ಖ್ಯಾತ ಬಾಲಿವುಡ್ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ ಪೂಜಾ ಭಟ್ ಅವರು ಕಾಂ ಯಾತ್ರೆ ಸೇರಿಕೊಂಡಿದ್ದು, ನಾಯಕರ ಜೊತೆ ಹೆಜ್ಜೆ ಹಾಕಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮಂಗಳವಾರ ಹೈದರಾಬಾದ್ ಪ್ರವೇಶಿಸಿದ್ದು, ಪಕ್ಷದ ಸದಸ್ಯರು ಮತ್ತು ಬೆಂಬಲಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Actress-filmmaker Pooja Bhatt briefly joins the Congress party's Bharat Jodo Yatra. The Yatra resumed from Hyderabad city in Telangana this morning.
(Source: AICC) pic.twitter.com/eIBiFQaLXi
— ANI (@ANI) November 2, 2022
ತೆಲಂಗಾಣದ ಮೂಲಕ ತನ್ನ ಪ್ರಯಾಣದ ಏಳನೇ ದಿನದಂದು ಯಾತ್ರೆಯು ನಾರಾಯಣಪೇಟೆ, ಮಹಬೂಬ್ನಗರ ಮತ್ತು ರಂಗಾರೆಡ್ಡಿ ಜಿಲ್ಲೆಗಳ ಮೂಲಕ ಹಾದು ಹೈದರಾಬಾದ್ಗೆ ತಲುಪಿತ್ತು. ಬೆಂಗಳೂರು-ಹೈದರಾಬಾದ್ ಹೆದ್ದಾರಿ ಮೂಲಕ ನಗರವನ್ನು ಪ್ರವೇಶಿಸಿದರು. ಈ ವೇಳೆ ಅನೇಕ ಪಕ್ಷದ ಪ್ರವರ್ತಕರು ಮತ್ತು ಕಾರ್ಯಕರ್ತರೊಂದಿಗೆ ರಾಹುಲ್ ಯಾತ್ರೆಯನ್ನು ಮುಂದುವರೆಸಿದರು.
ಯಾತ್ರೆಯಲ್ಲಿ ಕಾಂಗ್ರೆಸ್ ಸಂಸದ ಮತ್ತು ಯಾತ್ರೆಯ ಸಂಯೋಜಕ ಉತ್ತಮ್ ಕುಮಾರ್ ರೆಡ್ಡಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಾಯಕ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಮಾಜಿ ಸಂಸದ ಮಧು ಯಾಸ್ಕಿ ಗೌಡ್ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.