ದಕ್ಷಿಣ ಕನ್ನಡ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಪತ್ತೆಗೆ ಸುಳಿವು ನೀಡಿದವರಿಗೆ 14 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಘೋಷಿಸಿದೆ.
ಕಳೆದ ಜುಲೈ 26ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಅವರ ಪತ್ತೆಗಾಗಿ ಈಗ ಎನ್ಐಎ ಬಹುಮಾನವಾಗಿ ನಗದು ಘೋಷಿಸಿದೆ.
ಪ್ರಮುಖ ಆರೋಪಿಗಳಾದ ಬೆಳ್ಳಾರೆಯ ಮಹಮ್ಮದ್ ಮುಸ್ತಾಫಾ ಮತ್ತು ಮಡಿಕೇರಿಯ ತುಫೈಲ್ ಜೊತೆಗೆ ಕೊಲೆಗೆ ಸಹಕಾರ ನೀಡಿದ ಸುಳ್ಯದ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಬಗ್ಗೆ ಮಾಹಿತಿ ನೀಡಿದರೆ 14 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿದೆ.
ಮಾಹಿತಿದಾರರು info.blr.nia@gov.in ಅಥವಾ ದೂರವಾಣಿ ಸಂಖ್ಯೆ 080-29510900/8904241100 ಅಥವಾ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ತನಿಖಾ ದಳ (ಎನ್ಐಎ), 8ನೇ ಮಹಡಿ, ಸರ್. ಎಂ ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಮಲೂರು, ಬೆಂಗಳೂರು 560071 ಈ ವಿಳಾಸಕ್ಕೆ ಸಂಪರ್ಕಿಸಬಹುದಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎನ್ಐಎ ತಿಳಿಸಿದೆ.
ಸದ್ಯ, ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳಿಗಾಗಿ ಎನ್ಐಎ ತಂಡ ಹುಡುಕಾಟ ನಡೆಸುತ್ತಿದ್ದು, ಆದ್ರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಸುಳಿವು ಸಿಕ್ಕಿಲ್ಲ. ಹೀಗಾಗಿ ಎನ್ಐಎ ನಾಲ್ವರು ಪ್ರಮುಖ ಆರೋಪಿಗಳ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು, ಅದರಲ್ಲಿ ಕೊಡಗು ಮೂಲದ ತುಫೈಲ್ ಕೂಡ ಒಬ್ಬ. ಹೀಗಾಗಿ ತುಫೈಲ್ಗಾಗಿ ಎನ್ಐಎ ಮಡಿಕೇರಿಯಲ್ಲೂ ಹುಡುಕಾಟ ಆರಂಭಿಸಿದೆ. ಮಡಿಕೇರಿ ನಗರ ಪೊಲೀಸರ ಸಹಾಯದಿಂದ ಆತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಲಾಗಿದ್ದು, ಯಾರಾದರು ಈತನ ಸುಳಿವು ಸಿಕ್ಕಿದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ.
BIGG NEWS : ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ : ನ್ಯಾಯಬೆಲೆ ಅಂಗಡಿಗಳಲ್ಲೇ ಸಿಗಲಿವೆ ಈ ಎಲ್ಲಾ ಸೇವೆಗಳು!
BIGG NEWS: ಕಾಂತಾರ ಸಿನಿಮಾಗೆ ಸಂಕಷ್ಟ: ‘ವರಾಹ ರೂಪಂ’ ಹಾಡಿಗೆ ಮತ್ತೊಂದು ತಡೆಯಾಜ್ಞೆ
HEALTH TIPS: ಸಂಧಿವಾತದ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಲೇಬಾರದು…! ಯಾವುದು ಗೊತ್ತಾ?