ತೆಲಂಗಾಣ: ಕಳೆದ ವಾರ ಬುಡಕಟ್ಟು ಸಮುದಾಯದೊಂದಿಗೆ ಕೊಮ್ಮು ನೃತ್ಯ ಪ್ರದರ್ಶಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಆಂಧ್ರಪ್ರದೇಶ, ತೆಲಂಗಾಣ ಮತ್ತು ದಕ್ಷಿಣ ಒಡಿಶಾದ ಸಮುದಾಯಗಳ ಸಾಂಪ್ರದಾಯಿಕ ಜಾನಪದ ನೃತ್ಯವಾದ ದಿಮ್ಸಾ ಪ್ರದರ್ಶಿಸಿದರು. ಅಷ್ಟೇ ಅಲ್ಲದೇ, ಇತರ ಜಾನಪದ ಕಲಾವಿದರೊಂದಿಗೆ ಡೋಲು ಬಾರಿಸುವ ಮೂಲಕ ಹೆಜ್ಜೆ ಹಾಕಿದ್ದಾರೆ.
ಅಕ್ಟೋಬರ್ 29 ರಂದು ಭದ್ರಾಚಲಂನಲ್ಲಿ ಆದಿವಾಸಿಗಳೊಂದಿಗೆ ಕೊಮ್ಮು ಕೋಯಾದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಅವರು ಈ ಬಾರಿ ಬುಡಕಟ್ಟು ಶಿರಸ್ತ್ರಾಣವನ್ನು ಧರಿಸಲಿಲ್ಲ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 9 ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಈ ವೀಡಿಯೊವನ್ನು ಕಾಂಗ್ರೆಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
#WATCH | Congress MP Rahul Gandhi joins artists performing ‘Dhimsa’- a traditional folk dance of tribal people of Andhra, Telangana and southern Odisha.#BharatJodoYatra
(Source: AICC) pic.twitter.com/CL0u4qqgDD
— ANI (@ANI) November 3, 2022
BIG NEWS: ಪಿಂಚಣಿದಾರರೇ ಗಮನಿಸಿ: ʻಜೀವಂತ ಪ್ರಮಾಣ ಪತ್ರʼ ಸಲ್ಲಿಕೆ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ