ಹುಬ್ಬಳ್ಳಿ : ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.
BIGG NEWS : ಟ್ಯೂಷನ್ ತರಬೇತಿ ಕೇಂದ್ರ ಹಾಗೂ ವಸತಿ ಮನೆ ಪಾಠ ಕೇಂದ್ರಗಳ ನೋಂದಣಿ ಕಡ್ಡಾಯ
ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದ ಮಾಬೂಸಾಬ್ ಅಲಿಸಾಬ ಸಂಶಕಿ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಇಂದು ಬೆಳಗ್ಗೆ ಸ್ಪೋಟದ ಶಬ್ದ ಕೇಳಿ ಮನೆಯಿಂದ ಮಾಬೂಸಾಬ್ ಕುಟುಂಬಸ್ಥರು ಹೊರಗೆ ಒಡಿ ಬಂದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಬಟ್ಟೆ, ಗೃಹ ವಸ್ತುಗಳು ಬೆಂಕಿಗಾಹುತಿಯಾಗಿವೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.