ಬೆಂಗಳೂರು : ರಾಜ್ಯ ಸರ್ಕಾರವು ತೃತೀಯ ಲಿಂಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ತೃತೀಯ ಲಿಂಗಿಗಳಿಗಾಗಿ ಪ್ರತ್ಯೇಕ ಆಶ್ರಮ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಸರ್ಕಾರದಿಂದ 20 ಗುಂಟೆ ಜಮೀನು ಮಂಜೂರು ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
BIGG NEWS : ವಾಹನ ಸವಾರರಿಗೆ ಗುಡ್ ನ್ಯೂಸ್ : ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಇಳಿಕೆ!
ಬೆಂಗಳೂರು ಉತ್ತರದ ಗಂಗೊಂಡನಹಳ್ಳಿಯಲ್ಲಿ ತೃತೀಯ ಲಿಂಗಿಗಳಿಗೆ ಆಶ್ರಮ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವ ಆರ್. ಅಶೋಕ್, ತೃತೀಯ ಲಿಂಗಿಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಆಶ್ರಮದಿಂದ ಮಂಗಳಮುಖಿಯರಿಗೆ ಸೂರು ಸಿಗುವಂತಾಗಲಿ ಎಂದು ಹೇಳಿದ್ದಾರೆ.
ತೃತೀಯ ಲಿಂಗಿಗಳ ಆಶ್ರಮಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ. ಸಮಾಜ ಪರಿವರ್ತನೆಗೆ ಇದು ನಾಂದಿಯಾಗಲಿ, ಎಲ್ಲ ಸಂಘ, ಸಂಸ್ಥೆಗಳು ನೆರವು ನೀಡಲಿ ಎಂದು ಕರೆ ನೀಡಿದ್ದಾರೆ.