ದಾವಣಗೆರೆ: ಕಳೆದ ಭಾನುವಾರದಿಂದ ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ( Honnalli MLA MP Renukacharya ) ಅವರ ಸಹೋದರನ ಪುತ್ರ ಕಾಣೆಯಾಗಿದ್ದಾರೆ. ಅವರು ಯಾರಿಗಾದರೂ ಸಿಕ್ಕರೇ ಮಾಹಿತಿ ನೀಡುವಂತೆ ಶಾಸಕರು ಕೋರಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಚಂದ್ರಶೇಖರ್ ಬಳಸುತ್ತಿದ್ದ ಕಾರು ನ್ಯಾಮತಿ ಮಾರ್ಗವಾಗಿ ಹೊನ್ನಾಳಿ ಕಡೆಗೆ ಬಂದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಎಂ.ಪಿ ರಮೇಶ್ ಪುತ್ರ ಚಂದ್ರಶೇಖರ್ ಕಾಣೆಯಾಗುವ ಮುನ್ನಾ ದಿನ ರಾತ್ರಿ 11:30 ಕ್ಕೆ ಶಿವಮೊಗ್ಗದ ಜವಾಹಾರ್ ಲಾಲ್ ಇಂಜನಿಯರಿಂಗ್ ಕಾಲೇಜು ಬಳಿ ತನ್ನ ಸ್ನೇಹಿತನ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಆತನ ಹೆಸರು ಕಿರಣ್ ಎಂದು ಹೇಳಲಾಗಿದ್ದು, ಮೊಬೈಲ್ ಕರೆ ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ
ಈ ಕುರಿತಂತೆ ಟ್ವಿಟ್ ಮಾಡಿರುವಂತ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು, ನನ್ನ ಸಹೋದರನ ಮಗ ಚಂದ್ರಶೇಖರ್ ಕಳೆದ ಭಾನುವಾರ ರಾತ್ರಿ ಶಿವಮೊಗ್ಗದಿಂದ ಹೊನ್ನಾಳಿಗೆ ಬರುವಾಗ ಕಾಣೆಯಾಗಿದ್ದು, ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ, ದಯವಿಟ್ಟು ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕಾಗಿ ವಿನಂತಿಸುತ್ತಾನೆ. ‘ಚಂದ್ರು ಎಲ್ಲಿದ್ದರೂ ಬೇಗ ಮನೆಗೆ ವಾಪಾಸ್ ಬಾ ಮಗನೇ’ ಎಂಬುದಾಗಿ ಮನವಿ ಮಾಡಿದ್ದಾರೆ.
ಅಂದಹಾಗೇ ದಿನಾಂಕ 30-10-2022ರಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರ ಎಂ ಪಿ ರಮೇಶ್ ಅವರ ಹಿರಿಯ ಮಗ ಚಂದ್ರಶೇಖರ್ ಸಂಜೆ 7.30ಕ್ಕೆ ಕೆಎ-17, ಎಂಎ 2534 ಕಾರಿನಲ್ಲಿ ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ ತೆರಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವರು ವಾಪಸ್ ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ದೂರು ದಾಖಲಿಸಿಕೊಂಡಿರುವಂತ ದಾವಣಗೆರೆ ಪೊಲೀಸರು ( Davanagere Police ), ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಇರುವ ಬಗ್ಗೆ ಎಲ್ಲಿಯಾದರೂ ಮಾಹಿತಿ ಇದ್ದರೇ ತಿಳಿಸುವಂತೆ ಶಾಸಕ ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
BREAKING NEWS : ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ : ಆರೋಪಿ ಅಪ್ರಾಪ್ತ ಬಾಲಕನ ಬಂಧನ
ಬೆಳಗಾವಿ ಜಿಲ್ಲೆಯಲ್ಲಿ 132 ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ಆರೋಪಿಗಳ ಗಡಿಪಾರು