ಕೊಡಗು : ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳಿಗಾಗಿ ಎನ್ಐಎ ತಂಡ ಹುಡುಕಾಟ ನಡೆಸುತ್ತಿದ್ದು, ಆದ್ರೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಸುಳಿವು ಸಿಕ್ಕಿಲ್ಲ.
ಹೀಗಾಗಿ ಎನ್ಐಎ ನಾಲ್ವರು ಪ್ರಮುಖ ಆರೋಪಿಗಳ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು, ಅದರಲ್ಲಿ ಕೊಡಗು ಮೂಲದ ತುಫೈಲ್ ಕೂಡ ಒಬ್ಬ. ಹೀಗಾಗಿ ತುಫೈಲ್ಗಾಗಿ ಎನ್ಐಎ ಮಡಿಕೇರಿಯಲ್ಲೂ ಹುಡುಕಾಟ ಆರಂಭಿಸಿದೆ.
ಹಲವು ದಿನಗಳಿಂದ ಆರೋಪಿಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇದೀಗ ಎನ್ಐಎ ತಂಡ ನಾಲ್ಕು ಜನರ ವಾಂಟೆಡ್ ಲಿಸ್ಟ್ ರಿಲೀಸ್ ಮಾಡಿದ್ದು ಅದರಲ್ಲಿ ಕೊಡಗಿನ ತುಫೈಲ್ ಸುಳಿವು ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದೆ. ಮಡಿಕೇರಿ ನಗರ ಪೊಲೀಸರ ಸಹಾಯದಿಂದ ಆತನ ಮನೆ ಸೇರಿದಂತೆ ಸುಮಾರು 40 ಕಡೆಗಳಲ್ಲಿ ವಾಂಟೆಡ್ ಪೋಸ್ಟರ್ ಅಂಟಿಸಲಾಗಿದ್ದು, ಯಾರಾದರು ಈತನ ಸುಳಿವು ಸಿಕ್ಕಿದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ. ಮಡಿಕೇರಿಯ ಗದ್ದಿಗೆ ಬಳಿ ತುಫೈಲ್ ನಿವಾಸವಿದ್ದು, ಅವನಿಗೂ ನಮಗೂ ಜಗಳವಾಗಿ ಬೇರೆ ಇದ್ದೇವು, ಆದರೆ ಆತ ಮನೆ ಬಿಟ್ಟು 8 ತಿಂಗಳಾಗಿದೆ ಎನ್ನುತ್ತಾರೆ ಪೋಷಕರು.