ಬೆಂಗಳೂರು : ಸರ್ಕಾರ ತರಾತುರಿಯಲ್ಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿದೆ. ಸುಸಜ್ಜಿತ ವೇದಿಕೆಯಲ್ಲಿ ಕಾರ್ಯಕ್ರಮ ನಡೆದಿಲ್ಲ ಎಂದು ಡಿಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ ಅಲ್ಲಾ ರೀ..ಡಾ ರಾಜ್ ಕುಮಾರ್ ಗೆ ಈ ಹಿಂದೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡುವಾಗ ಸರ್ಕಾರ ಎಂತಹ ಕಾರ್ಯಕ್ರಮ ಮಾಡಿತ್ತು..ಆ ಕಾಲದಲ್ಲೇ ಎಂತಹ ಕಾರ್ಯಕ್ರಮ ಮಾಡಿದ್ದರು..ನಾನು ಕೂಡ ಅವಾಗ ಇದ್ದೇ…ಅದ್ದೂರಿಯಾಗಿ ರಾಜ್ ಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ನಿನ್ನೆ ಮಾತ್ರ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದೆ ಎಂದರು.
ನಿನ್ನೆ ಕಾರ್ಯಕ್ರಮದ ವೇದಿಕೆ ಕೂಡ ಸರಿಯಾಗಿ ಮಾಡಿರಲಿಲ್ಲ, ಪುನೀತ್ ಕುಟುಂಬಕ್ಕೆ ಹಾಗೂ ಗಣ್ಯರಿಗೆ ಕೂರಲು ಸಹ ಸರಿಯಾದ ಜಾಗ ಇರಲಿಲ್ಲ, ಸ್ಟೇಜ್ ಕತೆ ಏನು? ಸ್ಟೇಜ್ ಆರ್ಗಾನೈಸರ್ ಯಾರು ಎಂದು ಕಿಡಿಕಾರಿದ್ದಾರೆ.
ಮಳೆಯ ಕಾರಣ ಸರ್ಕಾರ ತರಾತುರಿಯಲ್ಲೇ ಕಾರ್ಯಕ್ರಮ ಮಾಡಿದೆ. ಅಪ್ಪು ಅಭಿಮಾನಿಗಳು ಮಳೆಯಲ್ಲಿ ನೆನೆಯುವಂತಾಯಿತು, ತರಾತುರಿಯಲ್ಲೇ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿಸಿದೆ ಎಂದು ಡಿಕೆಶಿ ಕಿಡಿಕಾರಿದರು.
Good News ; ಉದ್ಯೋಗಿಗಳಿಗೆ ಸಿಹಿ ಸುದ್ದಿ ; ಈಗ ನಿಮ್ಮ ಖಾತೆಯಿಂದ ಸಿಗುತ್ತೆ ‘ದುಪ್ಪಟ್ಟು ಲಾಭ’
ರೈಲ್ವೆ ಪ್ರಯಾಣಿಕರೇ ಗಮನಿಸಿ: ಪ್ರಯಾಣದ ವೇಳೇ ಈ ರೀತಿ ಮಾಡಿದ್ರೆ ದಂಡ ವಿಧಿಸಲಾಗುತ್ತದೆ
ಎಐಸಿಸಿ ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ಗೆ ಅಭಿನಂದನೆ : ನ.6 ರಂದು ಕೆಪಿಸಿಸಿ ವತಿಯಿಂದ ‘ಸರ್ವೋದಯ ಸಮಾವೇಶ’