ಹೈದರಾಬಾದ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹೈದರಾಬಾದ್ನಲ್ಲಿದೆ. 32 ವರ್ಷಗಳ ಹಿಂದೆ ತಂದೆ ರಾಜೀವ್ ಗಾಂಧಿ ಚಾರ್ಮಿನಾರ್ನಿಂದ ‘ಸದ್ಭಾವನಾ ಯಾತ್ರೆ’ಯನ್ನು ಪ್ರಾರಂಭಿಸಿದರು. ಆದ್ರೆ, ಇಂದು ಅದೇ ಸ್ಥಳದಲ್ಲಿ ರಾಹುಲ್ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ.
ಮಂಗಳವಾರ ರಾಹುಲ್ ಗಾಂಧಿ ಚಾರ್ಮಿನಾರ್ಗೆ ಆಗಮಿಸಿದ್ದರು. ಈ ವೇಳೆ ಜನದಟ್ಟಣೆಯಿಂದ ಕೂಡಿದ್ದ ಚಾರ್ಮಿನಾರ್ನಲ್ಲಿ ರಾಹುಲ್ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಅವರ ತಂದೆ ರಾಜೀವ್ ಗಾಂಧಿ ಅವರ ಭಾವಚಿತ್ರಕ್ಕೆ ರಾಹುಲ್ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹಿರಿಯ ನಾಯಕ ದಿಗ್ವಿಜಯ ಸಿಂಗ್, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರೇವಂತ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ʻ32 ವರ್ಷಗಳ ಹಿಂದೆ ಚಾರ್ಮಿನಾರ್ನಿಂದ ಸದ್ಭಾವನಾ ಯಾತ್ರೆ ಆರಂಭಿಸಿದ ನನ್ನ ತಂದೆ ಭಾರತದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು. ಸದ್ಭಾವನೆಯೇ ಮಾನವೀಯತೆಯ ಅದ್ವಿತೀಯ ಮೌಲ್ಯ. ನಾನು ಮತ್ತು ಕಾಂಗ್ರೆಸ್ ಪಕ್ಷವು ಅದನ್ನು ಕುಸಿಯಲು ಬಿಡುವುದಿಲ್ಲʼ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
32 साल पहले, पापा ने चारमीनार से सद्भावना यात्रा की शुरुआत की थी। भारत की एकता और अखंडता के लिए उन्होंने अपनी जान की क़ुर्बानी दी थी।
सद्भावना मानवता का सबसे अनुपम मूल्य है। मैं, और कांग्रेस पार्टी, इसे किसी विभाजनकारी ताक़त के सामने टूटने नहीं देंगे। pic.twitter.com/yrZU39BYpt
— Rahul Gandhi (@RahulGandhi) November 1, 2022
ಕಳೆದ 32 ವರ್ಷಗಳಿಂದ ಚಾರ್ಮಿನಾರ್ನಲ್ಲಿ ಶಾಂತಿ ಮತ್ತು ಸಮೃದ್ಧಿಯ ಪರಿಮಳ ಸ್ಥಿರವಾಗಿದೆ. ಅಕ್ಟೋಬರ್ 19, 1990 ರಂದು ರಾಜೀವ್ ಗಅಂದಿಯವರು ಇದೇ ಸ್ಥಳದಿಂದ ಸದ್ಭಾವನಾ ಯಾತ್ರೆಯನ್ನು ಪ್ರಾರಂಭಿಸಿದ ಸ್ಥಳವಾಗಿದೆ. ಇಂದು ಅದೇ ಜಾಗದಲ್ಲಿ ಮಗ ರಾಹುಲ್ ಧ್ಯಜಾರೋಹಣ ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರೀನಾಟೆ ತಿಳಿಸಿದ್ದಾರೆ.
SHOCKING NEWS: ಕಣ್ಣಾಮುಚ್ಚಾಲೆ ಆಡುವಾಗಲೇ ಬಂದ ಜವರಾಯ: ಸ್ನೇಹಿತರನ್ನು ಹುಡುಕುತ್ತಿದ್ದ ಬಾಲಕಿ ಲಿಫ್ಟ್ಗೆ ಬಲಿ
BIG NEWS: ಭಾರತ್ ಜೋಡೋ ಯಾತ್ರೆ: ʻರಾಹುಲ್ ಗಾಂಧಿʼ ಜೊತೆ ಹೆಜ್ಜೆ ಹಾಕಿದ ನಟಿ ʻಪೂಜಾ ಭಟ್ʼ | Bharat Jodo Yatra
SHOCKING NEWS: ಕಣ್ಣಾಮುಚ್ಚಾಲೆ ಆಡುವಾಗಲೇ ಬಂದ ಜವರಾಯ: ಸ್ನೇಹಿತರನ್ನು ಹುಡುಕುತ್ತಿದ್ದ ಬಾಲಕಿ ಲಿಫ್ಟ್ಗೆ ಬಲಿ