ಬೆಂಗಳೂರು: ಇಂದು ಸಂಜೆ ವಿಧಾನಸೌಧದ ಮುಂಭಾಗ ಡಾ.ಪುನೀತ್ರಾಜ್ಕುಮಾರ್ಗೆ ಮರೋಣತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿಯನ್ನು ನಟ, ನಿರ್ಮಾಪಕ, ಗಾಯಕ ಕರ್ನಾಟಕ ರತ್ನ ಪುನೀತ್ ರಾಜ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡ ಗೌರವಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ಅವರು ರಜನಿ ಕಾಂತ್ ನಾಡಿನ ಜನತೆ ಸಮ್ಮುಖದಲ್ಲಿ ಏಳು ಕೋಟಿ ಕನ್ನಡ ಮಕ್ಕಳಿಗೆ ರಾಜೋತ್ಸವದ ಶುಭಾಶಯಗಳು, ಎಲ್ಲರೂ ಜಾತಿ ಮತಗಳ ಭೇದವಿಲ್ಲದೇ ಎಲ್ಲರೂ ಒಂದಾಗಿ ಇರಲಿ ಅಂತ ಮನವಿ ಮಾಡಿಕೊಂಡರು. ಪುನೀತ್ ರಾಜ್ಕುಮಾರ್ ಅವರು ದೇವರ ಮಗು, ನಮ್ಮಲ್ಲಿ ಸ್ವಲ್ಪ ದಿನ ಇದ್ದು, ಅವರ ಆತ್ಮ ಇಲ್ಲದೇ ಇದ್ದು, ಅದು ಬಹಳ ದೊಡ್ಡ ಜೀವ ಮಳೆ ಕಾರಣದಿಂದ ಹೆಚ್ಚು ದಿನ ಮಾತನಾಡಲು ಸಾಧ್ಯವಾಗುತ್ತಿಲ್ಲ, ಮುಂದೆ ಒಂದು ದಿನ ಅಪ್ಪು ಅವರ ಬಗ್ಗೆ ಮಾತನಾಡುವೆ ಅಂತ ಹೇಳಿದರು.
ಪರಂಪರೆ ಮತ್ತು ಉಪನಾಮ ಅನ್ನೊದು ಹಿರಿಯರಿಂದ ಬರುತ್ತದೆ ವ್ಯಕ್ತಿತ್ವದ ಅನ್ನೋಂದು ಸ್ವಂತ ಸಂಪಾದನೆ, ಆಹಂ ಇಲ್ಲದೇ, ಯುದ್ದವಿಲ್ಲದೇ ಗೆದ್ದ ರಾಜ ಇದ್ದರೇ ಅದು ಪುನೀತ್ ರಾಜ್ಕುಮಾರ್ ಮಾತ್ರ ಅಂತ ಹೇಳಿದರು. ಅವರ ನಗುವಿನಲ್ಲೂ ಯಾರನ್ನು ಕಾಣಸಲು ಸಾಧ್ಯವಿಲ್ಲ ಅಂತ ಹೇಳಿದರು. ಇನ್ನೂ ಇದೇ ವೇಳೇ ನಾನು ಇಲ್ಲಿಗೆ ಬರಲುಕಾರಣ ಸಾಧನೆ ಕಾರಣದಿಂದ ಅಲ್ಲ ಬದಲಿಗೆ ಪುನೀತ್ ರಾಜ್ಕುಮಾರ್ ಅವರ ಸ್ನೇಹಿತ ಎನ್ನುವುದಕ್ಕೆ ಹೆಮ್ಮೆ ಆಗುತ್ತಿದೆ ಅಂತ ಹೇಳಿದರು.