ರಾಮನಗರ: ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ಮಾಗಡಿ ಪೊಲೀಸರು ಚುರುಕುಗೊಳಿಸಿದ್ದಾರೆ.
BREAKING NEWS: ಅಪ್ಪುʼಗೆ ʻಕರ್ನಾಟಕ ರತ್ನ ಪ್ರಶಸ್ತಿʼ ಪ್ರದಾನ: ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್
ಡಾ. ಮೃತ್ಯಂಜಯಶ್ರೀ, ನೀಲಾಂಬಿಕೆ , ಮಹಾದೇವಯ್ಯಗೆ ಪೊಲೀಸರು ಗ್ರಿಲ್ ಮಾಡುತ್ತಿದ್ದಾರೆ. ಆರೋಪಿಗಳ ಮೊಬೈಲ್ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ವಿಡಿಯೋ ರೆಕಾರ್ಡ್ ಆಗಿರುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ . ರೆಕಾರ್ಡ್ ಆಗಿರುವ ಮೂಲ ಮೊಬೈಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆ ಮೊಬೈಲ್ ಪತ್ತೆಯಾದ್ರೆ ಕೇಸ್ ಗೆ ಪ್ರಮುಖ ಎವಿಡೆನ್ಸ್ ಪತ್ತೆಯಾಗುತ್ತದೆ. ಇನ್ನು ಪೊಲೀಸರ ಮೊಬೈಲ್ ಪರಿಶೀಲನೆ ವೇಳೆ ಆರೋಪಿಗಳ ಕಳ್ಳಾಟ ಬಯಲು ಆಗಿದೆ. ಸುಮಾರು 6 ತಿಂಗಳ ವಾಟ್ಸಾಪ್ ಚಾಟ್ ಸಂಪೂರ್ಣ ಡಿಲೀಟ್ ಆಗಿದೆ. ವಾಟ್ಸಾಪ್ ಚಾಟ್ ಡಿಲೀಟ್ ಅನ್ನು ಆರೋಪಿಗಳು ಮಾಡಿದ್ದಾರೆ.
BREAKING NEWS: ಅಪ್ಪುʼಗೆ ʻಕರ್ನಾಟಕ ರತ್ನ ಪ್ರಶಸ್ತಿʼ ಪ್ರದಾನ: ಬೆಂಗಳೂರಿಗೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್
ಸಿಡಿಆರ್ , ಮೆಸೇಜ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಾಟ್ಸಾಪ್ ಚಾಟ್ ಹಿಸ್ಟರ್ ಗಾಗಿ ಆರೋಪಿಗಳ ಮೊಬೈಲ್ ರವಾನಿಸಲಾಗಿದೆ. ಬೆಂಗಳೂರಿನ ಎಫ್ ಎಸ್ ಎಲ್ ಕಚೇರಿಗೆ ಮೊಬೈಲ್ ರವಾನಿಸಲಾಗಿದೆ. ವಿಡಿಯೋ ಮೂಲಕ ಹಣ ಬೇಡಿಕೆ ಇಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಈ ಬಗ್ಗೆ ಕೋರ್ಟ್ ಗೆ ಪತ್ರ ಬರೆದು ಅನುಮತ ಪಡೆಯಲು ಪೊಲೀಸರು ಸಿದ್ಧತೆ ನಡೆಸಲಿದ್ದಾರೆ.