ಪಶ್ಚಿಮ ಬಂಗಾಳ: ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದ 37 ವರ್ಷದ ವ್ಯಕ್ತಿಯೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ.
ಏನಿದು ಘಟನೆ?
ಇಲ್ಲಿನ 37 ವರ್ಷದ ಶಿಕ್ಷಕನಿಗೆ ಇನ್ನೂ ಮದುವೆಯಾಗಿಲ್ಲ ಎಂಬ ಚಿಂತೆಯಾಗಿತ್ತು. ಇದರ ಪರಿಹಾರಕ್ಕಾಗಿ ತನ್ನ ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದ. ಈ ಕಷ್ಟಗಳು ದೂರವಾಗಬೇಕಾದ್ರೆ, ಅಪ್ರಾಪ್ತೆಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತೊಯ್ದ ಬಟ್ಟೆಯಲ್ಲಿ ತಂದ್ರೆ, ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದನು. ಇದನ್ನೇ ನಂಬಿದ ಶಿಕ್ಷಕ 2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಖಾಸಗಿ ಅಂಗದಿಂದ ಬಂದ ರಕ್ತವನ್ನು ತಂದಿದ್ದಾನೆ.
ವಿಷಯ ಬೆಳಕಿಗೆ ಬರುತ್ತಿದ್ದಂತೇ ಶಿಕ್ಷಕನನ್ನು ಕಳೆದ ವಾರ ಬಂಧಿಸಲಾಗಿದ್ದು, ತಂತ್ರಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
BIGG NEWS : `PSI’ ನೇಮಕಾತಿ ಪರೀಕ್ಷೆ ಅಕ್ರಮ : CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ
WATCH VIDEO: ಶಿರಚ್ಛೇದಿತ ಮಾನವನ ತಲೆಯನ್ನು ಬಾಯಲ್ಲಿ ಕಚ್ಚಿಕೊಂಡು ಬೀದಿ ಬೀದಿ ಸುತ್ತಿದ ನಾಯಿ… ಭಯಾನಕ ವಿಡಿಯೋ ವೈರಲ್
BIGG NEWS : `PSI’ ನೇಮಕಾತಿ ಪರೀಕ್ಷೆ ಅಕ್ರಮ : CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ