ನವದೆಹಲಿ : ಇಂದು ನಾವು ನವೆಂಬರ್(November) ತಿಂಗಳಿಗೆ ಕಾಲಿಟ್ಟಿದ್ದೇವೆ. ಈ ನವೆಂಬರ್ ತಿಂಗಳಲ್ಲಿ ಬ್ಯಾಂಕ್ ಅನ್ನು 10 ದಿನಗಳವರೆಗೆ ಮುಚ್ಚಲಾಗುವುದು. ಈ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರವೂ ಸೇರಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನವೆಂಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕುಗಳು ರಾಜ್ಯವನ್ನು ಅವಲಂಬಿಸಿ ಎಲ್ಲಾ ಸಾರ್ವಜನಿಕ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳನ್ನು ಹೊಂದಿರುತ್ತವೆ. ಪ್ರಾದೇಶಿಕ ರಜಾದಿನಗಳನ್ನು ಸಂಬಂಧಪಟ್ಟ ರಾಜ್ಯದ ಸರ್ಕಾರವು ನಿರ್ಧರಿಸುತ್ತದೆ.
ನವೆಂಬರ್ 2022 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
ನವೆಂಬರ್ 1 : ಕನ್ನಡ ರಾಜ್ಯೋತ್ಸವ
ನವೆಂಬರ್ 6 : ಭಾನುವಾರ (ವಾರದ ರಜೆ)
ನವೆಂಬರ್ 8 : ಗುರುನಾನಕ್ ಜಯಂತಿ, ವಂಗ್ಲಾ ಉತ್ಸವ
ನವೆಂಬರ್ 11 : ಕನಕದಾಸ ಜಯಂತಿ
ನವೆಂಬರ್ 12 : ಶನಿವಾರ (ತಿಂಗಳ ಎರಡನೇ ಶನಿವಾರ)
ನವೆಂಬರ್ 13 : ಭಾನುವಾರ (ವಾರದ ರಜೆ)
ನವೆಂಬರ್ 20 : ಭಾನುವಾರ (ವಾರದ ರಜೆ)
ನವೆಂಬರ್ 23 : ಬುಧವಾರ
ನವೆಂಬರ್ 26 : ಶನಿವಾರ (ತಿಂಗಳ ನಾಲ್ಕನೇ ಶನಿವಾರ)
ನವೆಂಬರ್ 27 : ಭಾನುವಾರ (ವಾರದ ರಜೆ)
BIGG NEWS : ಇಂದು ‘Digital Rupee’ ಲಾಂಚ್, ಎಸ್ಬಿಐ ಸೇರಿ 9 ಬ್ಯಾಂಕ್ಗಳಿಗೆ ಮಾನ್ಯತೆ |RBI Digital Rupee