ಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಡಿಯಲ್ಲಿ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ.
ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ನಾಯಕ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಡಾ.ವೀರೇಂದ್ರ ಹೆಗ್ಗಡೆ ಅವರು ಹೆಚ್ಚಿನ ಆಸ್ತಿ ಸ್ಥಿರಾಸ್ತಿ ಹೊಂದಿದ್ದಾರೆಂದು ಆರೋಪ ಮಾಡಿದ್ದ ಸೋಮನಾಥ ನಾಯಕ್ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹೆಗ್ಗಡೆ ವಿರುದ್ಧ ಮಾತನಾಡಿದ್ದರು. ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು,
ಸೋಮನಾಥ ನಾಯಕ್ ವಿರುದ್ಧ ಹೆಗ್ಗಡೆ ಕುಟುಂಬ ಬೆಳ್ತಂಗಡಿ ಕೋರ್ಟ್ಗೆ ದೂರು ನೀಡಿದ್ದು, ದೂರು ಆಲಿಸಿದ ಕೋರ್ಟ್ ಅಪಪ್ರಚಾರ ಮಾಡದಂತೆ ಪ್ರತಿಬಂಧಕಾಜ್ಞೆ ವಿಧಿಸಿತ್ತು. ಆದರೆ ಅದನ್ನು ಉಲ್ಲಂಘಿಸಿ ಮತ್ತೆ ಆರೋಪ ಮುಂದುವರೆಸಿದ್ದ ಸೋಮನಾಥ ನಾಯಕ್ ಸಾಮಾಜಿಕ ತಾಣಗಳಲ್ಲೂ ಹೆಗ್ಗಡೆಯವರ ಬಗ್ಗೆ ಅಪಪ್ರಚಾರ ಮಾಡಿದ್ದರು.
ಈ ಹಿನ್ನೆಲೆ ಕೋರ್ಟ್ ಸೋಮನಾಥ ನಾಯಕ್ಗೆ 3 ತಿಂಗಳ ಸಜೆ, ಕ್ಷೇತ್ರಕ್ಕೆ 4.5 ಲಕ್ಷ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿ, ನಾಯಕ್ ಆಸ್ತಿಯನ್ನು ಮುಟ್ಟುಗೋಲು ಕೂಡ ಹಾಕಿಕೊಂಡಿತ್ತು.ನಂತರ ಕೆ.ಸೋಮನಾಥ ನಾಯಕ್ ಹೈಕೋರ್ಟ್ ಮೊರೆ ಹೋಗಿದ್ದರು.ಆದರೆ ಹೈಕೋರ್ಟ್ ಕೂಡಾ ಬೆಳ್ತಂಗಡಿ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಹೀಗಾಗಿ ಸೋಮನಾಥ ನಾಯಕ್ ಬೆಂಬಲಿಗರ ಜೊತೆ ಬೆಳ್ತಂಗಡಿ ಕೋರ್ಟ್ಗೆ ಶರಣಾಗಿದ್ದಾರೆ.
BREAKING NEWS : ‘ಇನ್ಸ್ಟಾಗ್ರಾಮ್’ ಸರ್ವರ್ ಡೌನ್, ಏಕಕಾಲದಲ್ಲಿ ‘ಅನೇಕ ಖಾತೆ’ ಅಮಾನತು |Instagram Down
ಚಿಕ್ಕಮಗಳೂರು: ಕನ್ನಡ ಶಾಲಾ-ಕಾಲೇಜು ಉಳಿಸಿ ಬೆಳೆಸಿ, ಕಟ್ಟುವ ಪ್ರತಿಜ್ಞೆ ಮಾಡೋಣ – ಉಪನ್ಯಾಸಕ ಡಾ.ಕೆಎಲ್ ಚಂದ್ರಶೇಖರ್