ನವದೆಹಲಿ : ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರ ದೂರಿನ ಆಧಾರದ ಮೇಲೆ ಸುದ್ದಿ ವೆಬ್ಸೈಟ್ ವಿರುದ್ಧ ದಾಖಲಿಸಲಾದ ಎಫ್ಐಆರ್ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ‘ದಿ ವೈರ್ ಪತ್ರಿಕೆಯ ಇಬ್ಬರು ಸಂಪಾದಕರ ನಿವಾಸವನ್ನು ಶೋಧ ಕಾರ್ಯ ನಡೆಸಿದ್ದಾರೆ.
ಸುದ್ದಿ ವೆಬ್ಸೈಟ್ ದಿ ವೈರ್ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್ ಮತ್ತು ಎಂಕೆ ವೇಣು ಅವರ ಮನೆಗಳನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಶೋಧ ನಡೆಸಿದ್ದು, ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸಿದೆ.ಆದರೆ, ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ‘ದಿ ವೈರ್’ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸುವ ಸಲುವಾಗಿ ಜೋಡಿ ಎಲೆಕ್ಟ್ರಾನಿಕ್ ಸಾಧನಗಳನ್ನು ಶೋಧಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
#UPDATE | Investigation is underway pertaining to 'The Wire' case and no arrests have been made so far: Delhi Police
— ANI (@ANI) October 31, 2022
ವಂಚನೆ ಮತ್ತು ಫೋರ್ಜರಿ ಹಾಗೂ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಮಿತ್ ಮಾಳವೀಯಾ ದೂರು ನೀಡಿದ್ದರು.
ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ(ಫೇಸ್ಬುಕ್ ಮಾತೃಸಂಸ್ಥೆ) ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700 ಕ್ಕೂ ಹೆಚ್ಚು ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿ ವೈರ್ ಮತ್ತು ಅದರ ಸಂಸ್ಥಾಪಕ, ಸಂಪಾದಕರ ವಿರುದ್ಧ ದೂರು ದಾಖಲಿಸಿದ್ದರು.
BIGG NEWS ; ಗುಜರಾತ್ ದುರಂತ ಮರೆಯೋ ಮುನ್ನವೇ ಯುಪಿಯಲ್ಲಿ ಮತ್ತೊಂದು ಅವಘಡ, ಕುಸಿದು ಬಿದ್ದ ‘ಸೇತುವೆ’, ವಿಡಿಯೋ ವೈರಲ್