ಬೆಂಗಳೂರು : ಪುನೀತ್ ರಾಜಕುಮಾರ್ ಗೆ ನಾಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದ್ದು, ಈ ಹಿನ್ನೆಲೆ ನಗರದಲ್ಲಿ ವಾಹನ ಸಂಚಾರದಲ್ಲಿ ಕೆಲವು ಬದಲಾವಣೆಯಾಗಲಿದೆ.
ವಿಧಾನ ಸೌಧ ಮುಂಭಾಗ ನಾಳೆ ಕಾರ್ಯಕ್ರಮ ನಡೆಯಲಿದ್ದು, ನಾಳೆ (ನ.1) ರ ಮಧ್ಯಾಹ್ನ 1 ಗಂಟೆ ವೇಳೆಗೆ ಕೆ.ಆರ್.ವೃತ್ತದಿಂದ ತಿಮ್ಮಯ್ಯ ಜಂಕ್ಷನ್ವರೆಗೆ ಖಾಸಗಿ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದೆ.
ಸಂಚಾರ ದಟ್ಟಣೆ ತಪ್ಪಿಸಲು ಸಾರ್ವಜನಿಕರು ಸಾರಿಗೆ ಮತ್ತು ಮೆಟ್ರೋ ಬಳಸುವಂತೆ ಸಂಚಾರಿ ಪೋಲಿಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
BREAKING : 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ