ಬನಸ್ಕಾಂತಾ : ಗುಜರಾತ್ ರಾಜ್ಯದ ಬನಸ್ಕಾಂತಾ ಜಿಲ್ಲೆಯ ಥರಾಡ್’ನಲ್ಲಿ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ನಂತ್ರ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವಾಗ ನಿನ್ನೆ ಮೊರ್ಬಿಯಲ್ಲಿ ನಡೆದ ಘೋರ ಕೇಬಲ್ ಸೇತುವೆ ಕುಸಿತ ದುರಂತ ನೆನೆದು ಭಾವುಕರಾದರು.
ಬನಸ್ಕಾಂತ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, “ಇದು ತುಂಬಾ ನೋವಿನ ಸಂಗತಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರಬೇಕೆ ಅಥವಾ ಬೇಡವೇ ಎಂದು ನನಗೆ ಎರಡನೇ ಆಲೋಚನೆ ಇತ್ತು ” ಎಂದು ಹೇಳಿದರು. ನಂತ್ರ ಒಂದು ಕ್ಷಣ ಸುಮ್ಮನಾದ ಪ್ರಧಾನಿ, “ಇದು ಅಭಿವೃದ್ಧಿ ಯೋಜನೆಯ ಕಾರ್ಯಕ್ರಮ ಮತ್ತು ಅವರನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ ಜನರು ಈ ಕಾರ್ಯಕ್ರಮಕ್ಕೆ ಬರಲು ಜವಾಬ್ದಾರರನ್ನಾಗಿ ಮಾಡಿದರು. ಇನ್ನು “ನಿಮ್ಮ ವಾತ್ಸಲ್ಯವೇ ಈ ಕಾರ್ಯಕ್ರಮಕ್ಕೆ ಹಾಜರಾಗಲು ನನ್ನನ್ನು ಪ್ರೇರೇಪಿಸಿತು” ಎಂದು ಹೇಳಿದರು.
ಇದಕ್ಕೂ ಮೊದಲು, ಪ್ರಧಾನಿ ಮೋದಿ ಅವರು ಸೇತುವೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಈ ದುಃಖದ ಸಮಯದಲ್ಲಿ, ಸರ್ಕಾರವು ದುಃಖತಪ್ತ ಕುಟುಂಬಗಳೊಂದಿಗೆ ಎಲ್ಲಾ ರೀತಿಯಲ್ಲೂ ಇದೆ. ಗುಜರಾತ್ ಸರ್ಕಾರವು ನಿನ್ನೆಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಕೇಂದ್ರವು ರಾಜ್ಯ ಸರ್ಕಾರಕ್ಕೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಸಹ ಒದಗಿಸುತ್ತಿದೆ ಎಂದರು. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 1 ರಂದು ಮೊರ್ಬಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ.
ಅಂದ್ಹಾಗೆ, ಗುಜರಾತ್ನ ಮೊರ್ಬಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಕೇಬಲ್ ಬ್ರಿಡ್ಜ್ ಕುಸಿದು 49 ಮಕ್ಕಳು ಸೇರಿದಂತೆ 134 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪ್ರಕರಣದ ಸಂಬಂಧ ಗುಜರಾತ್ ಪೊಲೀಸರಿಂದ ಇಬ್ಬರ ಬಂಧಿಸಿದೆ.
#WATCH | PM Modi gets emotional as he talks about #MorbiBridgeCollapse tragedy, in Gujarat's Banaskantha pic.twitter.com/0pmVmGmC0f
— ANI (@ANI) October 31, 2022