ಬೆಳಗಾವಿ: ನಾಳೆ ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಆಚರಣೆಗಾಗಿ ಈಗಾಗಲೇ ಸಿದ್ಧತೆ ನಡೆದಿದೆ. ರಾಜ್ಯೋತ್ಸವ ಪ್ರಯುಕ್ತ ಸರ್ಕಾರ ಕೋಟಿ ಕಂಠ ಗಾಯನ ಚಾಲನೆ ನೀಡಿದೆ. ಈ ನಡುವೆಯೇ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಮೆರೆಯಲು ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಎಂಇಎಸ್ ಪ್ಲ್ಯಾನ್ ಮಾಡಿದ್ದು, ಶಿವಸೇನೆ ಪಕ್ಷದ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರು ಬೀಗಿ ಬಂದೋಬಸ್ತ್ ಮಾಡಿದ್ದಾರೆ. ಗಡಿ ಅಂಚಿನಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟ್, ಬೆಳಗಾವಿ ತಾಲೂಕಿನ ಬಾಚಿ ಚೆಕ್ ಪೋಸ್ಟ್ ಎರಡು ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
3 ಡಿಎಸ್ಪಿ, 5 ಸಿಪಿಐ, 1 ಡಿಎಆರ್ ತುಕಡಿ, 1 ಕೆಎಸ್ಆರ್ಪಿ ತುಕಡಿ, 50 ಹೋಂ ಗಾರ್ಡ್ಗಳ ನಿಯೋಜನೆ ಮಾಡಲಾಗಿದ್ದು, ಶಿವಸೇನೆ ಕಾರ್ಯಕರ್ತರು ಗಡಿ ಪ್ರವೇಶಿಸದಂತೆ ಖಾಕಿ ಪೊಲೀಸರ ಸರ್ಪಗಾವಲಿದೆ. ಇನ್ನು ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ತಪಾಸಣೆ ಮಾಡಲಾಗುತ್ತಿದೆ.
ಇನ್ನೂ, ಬೆಳಗಾವಿಯಲ್ಲಿ ನಡೆಯುವ ಅದ್ಧೂರಿ ಕನ್ನಡ ರಾಜ್ಯೋತ್ಸವ ಹಾಗೂ ಎಂಇಎಸ್ ಪುಂಡರ್ ಕರಾಳ ದಿನಾಚರಣೆ ಹಿನ್ನೆಲೆ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಬೆಳಗಾವಿ ನಗರ ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ವಾಹನಗಳ ರೂಟ್ ಮಾರ್ಚ್ ನಡೆಸಲಾಯಿತು.
‘ಮೋದಿಯವರ ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ’ : ಕಾಂಗ್ರೆಸ್ ವಾಗ್ಧಾಳಿ
BIGG NEWS: ಮಂಡ್ಯ ಬಾಲಕಿ ಅತ್ಯಾಚಾರ ಬೆನ್ನಲ್ಲೇ ಅನಧಿಕೃತ ಟ್ಯೂಷನ್ಗೆ ಬ್ರೇಕ್: ಹೊಸ ರೂಲ್ಸ್