ಬೆಂಗಳೂರು : ಮೋದಿಯವರ ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ .
ಮೋದಿಯವರ ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ! ಕೇಂದ್ರ ಸರ್ಕಾರ ರಾಜ್ಯದ ಪಾಲಿನ GST ಬಾಕಿ ಕೊಡಲಿಲ್ಲ, ಯೋಜನೆಗಳಿಗೆ ಅನುದಾನ ಕೊಡಲಿಲ್ಲ, ಕನ್ನಡಿಗರಿಗೆ ನಿಲ್ಲದ ಅನ್ಯಾಯಕ್ಕಾಗಿ ಈ ಸ್ಥಿತಿಯೇ ಅಶೋಕ್ ಅವರೇ? ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆಯ ನಂತರ ಉಪಯೋಗಕ್ಕೆ ಬರಲಿದೆ ಎಂದು ವ್ಯಂಗ್ಯವಾಡಿದೆ.
ಇನ್ನೊಂದು ಟ್ವೀಟ್ ನಲ್ಲಿ ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ. 20 ಕ್ಯಾಂಟೀನ್ಗಳಿಗೆ ಬೀಗ ಹಾಕಿದ ಬೊಮ್ಮಾಯಿ ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ? ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ? ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ? ಎಂದು ವಾಗ್ಧಾಳಿ ನಡೆಸಿದೆ.
ಮೋದಿಯವರ #Pakodanomics ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ!
ಕೇಂದ್ರ ಸರ್ಕಾರ ರಾಜ್ಯದ ಪಾಲಿನ GST ಬಾಕಿ ಕೊಡಲಿಲ್ಲ, ಯೋಜನೆಗಳಿಗೆ ಅನುದಾನ ಕೊಡಲಿಲ್ಲ, ಕನ್ನಡಿಗರಿಗೆ ನಿಲ್ಲದ ಅನ್ಯಾಯಕ್ಕಾಗಿ ಈ ಸ್ಥಿತಿಯೇ @RAshokaBJP ಅವರೇ?
ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆಯ ನಂತರ ಉಪಯೋಗಕ್ಕೆ ಬರಲಿದೆ! pic.twitter.com/QDAPufsvwK
— Karnataka Congress (@INCKarnataka) October 31, 2022
ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ.
20 ಕ್ಯಾಂಟೀನ್ಗಳಿಗೆ ಬೀಗ ಹಾಕಿದ @BSBommai ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ?
ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ?ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ?#SayCM pic.twitter.com/Y2ZmVGOzdJ
— Karnataka Congress (@INCKarnataka) October 31, 2022