ಮೊರ್ಬಿ : ಗುಜರಾತಿನ ಮೊರ್ಬಿ ಪಟ್ಟಣದಲ್ಲಿ ತೂಗು ಸೇತುವೆ ಕುಸಿದು ಸಾವನ್ನಪ್ಪಿದವರಲ್ಲಿ ರಾಜ್ಕೋಟ್ನ ಬಿಜೆಪಿ ಲೋಕಸಭಾ ಸದಸ್ಯ ಮೋಹನ್ ಕುಂದರಿಯಾ ಸುಮಾರು 12 ಮಂದಿ ಸಂಬಂಧಿಕರು ಸೇರಿದ್ದಾರೆ ಎನ್ನಲಾಗುತ್ತಿದೆ.
ಈ ಅಪಘಾತದಲ್ಲಿ ರಾಜ್ಕೋಟ್ ಬಿಜೆಪಿ ಸಂಸ ಮೋಹನ್ ಕುಂದರಿಯಾ ಅವರ ಸಹೋದರಿಯ ಪತಿಯ ಸಹೋದರನ ನಾಲ್ವರು ಪುತ್ರಿಯರು, 3 ಅಳಿಯಂದಿರು ಮತ್ತು 5 ಮಕ್ಕಳು ಸಾವನ್ನಪ್ಪಿದ್ದಾರೆ.
ಬಿಜೆಪಿ ಸಂಸದ ಮೋಹನ್ ಕುಂದರಿಯಾ ಮೋರ್ಬಿಯಲ್ಲಿ ಸೇತುವೆ ಕುಸಿತದ ಅಪಘಾತದ ನಂತರ ಸ್ಥಳದಲ್ಲಿದ್ದು, ಅವರು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆಯಿಂದ ಕುಪಿತಗೊಂಡ ಸಂಸದ ಕುಂದರಿಯಾ, ಈ ಘಟನೆಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದಕ್ಕೆ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಈ ಕುರಿತು ತನಿಖೆ ನಡೆಸಿದ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಈ ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ ಎಂದು ಮೋಹನ್ ಕುಂದರಿಯಾ ಹೇಳಿದ್ದಾರೆ. ರಾತ್ರಿಯಿಡೀ ನಿರಂತರವಾಗಿ ಫೋನ್ ಮೂಲಕ ಎಲ್ಲದರ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ.
ಇದಲ್ಲದೇ ಸೇತುವೆ ಕುಸಿದು ಬಿದ್ದ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. ಸೇನಾ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಗೃಹ ಖಾತೆ ರಾಜ್ಯ ಸಚಿವ ಹರ್ಷ ಶಾಂಘ್ವಿ ಕೂಡ ಉಪಸ್ಥಿತರಿದ್ದರು. ಘಟನಾ ಸ್ಥಳವನ್ನು ಪರಿಶೀಲಿಸಿದ ಅವರು ರಕ್ಷಣಾ ಕಾರ್ಯದ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರು. ಮೊರ್ಬಿ ಸೇತುವೆ ಕುಸಿದ ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ನಿನ್ನೆ ಸಂಜೆ ಮಚ್ಚು ನದಿಯ ತೂಗು ಸೇತುವೆ ಕುಸಿದು ಕನಿಷ್ಠ 141 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಅವರು ದುರಂತ ಸಂಭವಿಸಿದ ಪಿಕ್ನಿಕ್ ಸ್ಥಳಕ್ಕೆ ಹೋಗಿದ್ದರು. ಇವರೆಲ್ಲ ಟಂಕರ ತಾಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಇವರು ಮೋರ್ಬಿಯಲ್ಲಿ ನೆಲೆಸಿದ್ದರು. ಘಟನೆ ನಡೆದ ಅರ್ಧ ಗಂಟೆಯ ನಂತರ ನಾನು ಅಲ್ಲಿಗೆ ತಲುಪಿದೆ ಎಂದು ತಿಳಿಸಿದ್ದಾರೆ.
ಸೇತುವೆ ಕುಸಿತದ ಘಟನೆಯ ನಂತರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೊರ್ಬಿಯಲ್ಲಿ ಕ್ಯಾಂಪ್ ಮಾಡುತ್ತಿದ್ದಾರೆ ಎಂದು ಕುಂದರಿಯಾ ಹೇಳಿದರು.