ಬೆಂಗಳೂರು: ಈಡಿಗ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಒಂದು Separate ಕೋಶವನ್ನು ರಚಿಸಿ ಸರ್ಕಾರಿ ಆದೇಶವನ್ನು
ಹೊರಡಿಸಲು ಹಾಗೂ ಈ ಕೋಶದ ನಿರ್ವಹಣೆ ಹಾಗೂ ಉಸ್ತುವಾರಿಗಾಗಿ ಆದೇಶವನ್ನು ರಾಝ್ಯ ಸರ್ಕಾರ ಹೊರಡಿಸಿದೆ. ಈ ಕೋಶಕ್ಕೆ ಸರ್ಕಾರದಿಂದ ಅನುದಾನವನ್ನು Separate Corpus Fund ಸ್ಮಾಪಿಸಿ, ಈ ಕೋಶದಿಂದ ಈಡಿಗ ಸಮಾಜದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದೆಂದು ಆದೇಶದಲ್ಲಿ ತಿಳಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂಖ್ಯೆ:ಸಕಇ 225 ಬಿಸಿಎ 2000, ದಿನಾಂಕ:30/03/2002ರ ಜಾತಿ ಪಟ್ಟಿಯಲ್ಲಿ ಪ್ರವರ್ಗ 2’ಎ’ರಲ್ಲಿ ಕ್ರಮಸಂಖ್ಯೆ 4(a)ಯಿಂದ (2) ವರೆಗೆ ಈಡಿಗ ಸೇರಿದಂತೆ ನಮೂದಾಗಿರುವ ಒಟ್ಟು 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶವನ್ನು ಸ್ಥಾಪಿಸಿ ಆದೇಶಿಸಿದ. ಈ ಕೋಶದಿಂದ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಹಾಗೂ ಕೋಶದ ನಿರ್ವಹಣೆಗಾಗಿ ಪ್ರತ್ಯೇಕ ಕಾರ್ಪಸ್ ಫಂಡ್ (Separate Corpus Fund)ನ್ನು ಸ್ಥಾಪಿಸಲಾಗುವುದು ಅಂತ ತಿಳಿಸಿದೆ.