ಮಂಡ್ಯ: ಜಿಲ್ಲೆಯ ಇಂಡುವಾಳು ಗ್ರಾಮದಲ್ಲಿ ಬೆಂಗಳೂರು- ಮೈಸೂರು ದಶಪಥ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗೆ ಕಲ್ಲು ತೋರಿಸಿ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ.
ನನ್ನ ಮನೆ ಒಂದಿಂಚು ಜಾಸ್ತಿ ಹೊಡೆದರೂ ಕಲ್ಲಲ್ಲಿ ಹೊಡಿತೀನಿ ಎಂದು ಮಾಲೀಕ ಅವಾಜ್ ಹಾಕಿದ್ದಾರೆ. ನಿಗದಿಯಾದ ಕಟ್ಟಡವನ್ನಷ್ಟೇ ಹೊಡೆಯಬೇಕು. ಒಂದಿಂಚು ಜಾಸ್ತಿ ಕೆಡವಿದರೂ ನಾನು ನಿನಗೆ ಹೊಡೆಯುತ್ತೇನೆ ಎಂದು ಮನೆ ಮಾಲೀಕ ರಾಜೇಗೌಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪರಿಹಾರ ತಾರತಮ್ಯ ಆರೋಪ, ಮನೆ ಕೆಡವಲು ಕೆಲ ಮಾಲೀಕರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಲೆ ಬಾಳುವ ಜಾಗಕ್ಕೆ ಕಡಿಮೆ ಪರಿಹಾರ ನೀಡಿದ್ದಾರೆಂದು ಕೆಲ ಮಾಲೀಕರು ಆರೋಪಿಸಿದ್ದಾರೆ. ಕೆಲದಿನಗಳ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.ಇಂದು ಬೆಳ್ಳಂಬೆಳ್ಳಗ್ಗೆ ಮನೆ ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಆಗಮಿಸಿ ಮನೆ ತೆರವುಗೊಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.