ಉತ್ತರಕನ್ನಡ: ಜಿಲ್ಲೆಯಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಬೇಡಿಕೆ ಹೆಚ್ಚಾಗಿದೆ. ಎಷ್ಟು ಹೋರಾಟ ಮಾಡಿದ್ರೂ ಸರ್ಕಾರ ಬರಿ ಬಾಯಿ ಮಾತಿಗೆ ಆಸ್ಪತ್ರೆ ನಿರ್ಮಾಣ ಕುರಿತು ಹೇಳಿದಂತೆ ಆಗಿದೆ.
Big Breaking News : ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸದ್ಯ ಕುಮಟಾದ ಮಿರ್ಜಾನ್ ಬಳಿ ಜಾಗ ಪರಿಶೀಲನೆ ನಡೆಸಿದೆಯಾದರೂ ಈವರೆಗೂ ಆಸ್ಪತ್ರೆ ಮಂಜೂರು ಮಾಡುವ ಕೆಲಸ ಮಾಡಿಲ್ಲ. ಇನ್ನೇನು ಕೆಲ ತಿಂಗಳುಗಳಲ್ಲಿಯೇ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಮತ್ತೆ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಚುನಾವಣೆ ಭರವಸೆಯಾಗುವ ಲಕ್ಷಣ ಗೋಚರವಾಗಿದೆ. ಇದೇ ಕಾರಣಕ್ಕೆ ಜೆಡಿಎಸ್ ನಾಯಕ ಸೂರಜ್ ನಾಯಕ ಸೋನಿ ನೇತೃತ್ವದಲ್ಲಿ ಹೊನ್ನಾವರದ ಶರಾವತಿ ಸರ್ಕಲ್ ಬಳಿಯಿಂದ ಕುಮಟಾವರೆಗೆ ಸುಮಾರು 25 ಕಿ.ಮೀ ಜನಪರ ಯಾತ್ರೆ ನಡೆಸಲಾಗಿದೆ.
Big Breaking News : ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಗೆ ಅತಿ ಅಗತ್ಯವಿರುವ ಸೂಪರ್ ಸ್ಪೇಷಾಲಿ ಆಸ್ಪತ್ರೆ ಮಂಜೂರಿಸಲು ಸರ್ಕಾರ ವಿಳಂಭ ಮಾಡುವ ಮೂಲಕ ಬೇಡಿಕೆಯನ್ನು ಚುನಾವಣೆವರೆಗೂ ಕೊಂಡೊಯ್ಯುವ ತಂತ್ರ ನಡೆಸಿದೆ. ಪರೇಶ ಮೇಸ್ತಾ ಸಾವಿನ ಪ್ರಕರಣದಂತೆ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಸೂರಜ್ ನಾಯಕ ಆರೋಪಿಸಿದ್ದಾರೆ.