ಗುಜರಾತ್: ಗುಜರಾತ್ನ ಮೊರ್ಬಿಯಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದು ನವೀಕರಣಗೊಂಡ ಒಂದು ವಾರದ ನಂತರ ಮುರಿದು ಬಿದ್ದು ನಿನ್ನೆ ಭೀಕರ ದುರಂತವೊಂದು ( Gujarat’s Morbi cable bridge collapse ) ಸಂಭವಿಸಿತ್ತು. ಘಟನೆಯಿಂದಾಗಿ ಸಾವಿನ ಸಂಖ್ಯೆ ಇದೀಗ 141ಕ್ಕೆ ಏರಿಕೆಯಾಗಿದೆ.
ಅಹಮದಾಬಾದ್ನಿಂದ 200 ಕಿಮೀ ದೂರದಲ್ಲಿರುವ ತೂಗು ಸೇತುವೆ ನಿನ್ನೆ ಸಂಜೆ 6.42ಕ್ಕೆ ಕುಸಿದು ಬಿದ್ದಿದ್ದು, ಛಾತ್ ಪೂಜೆಗೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ಮಾಡಲು ಸುಮಾರು 500 ಜನರು ಅದರ ಮೇಲೆ ಜಮಾಯಿಸಿದ್ದ ವೇಳೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಮಚ್ಚು ನದಿಯ ನೀರಿನಲ್ಲಿ ನೂರಾರು ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ. ಸ್ಥಳದಿಂದ ಬಂದ ವೀಡಿಯೊಗಳು ಅನೇಕರು ನೀರಿನಲ್ಲಿ ಮುಳುಗುತ್ತಿರುವುದನ್ನು ತೋರಿಸಿದು, ದಡವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯರು ಹೇಳುತ್ತಾರೆ.
BIGG NEWS : ರಾಜ್ಯದಲ್ಲಿ ಮತ್ತೆ 40% ಕಮಿಷನ್ ಸದ್ದು : ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ!
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮಣ್ಣಿನ ರಾಶಿ ಕುಸಿದು ಇಬ್ಬರು ಬಾಲಕಿಯರು ಸಾವು, ಮೂವರ ರಕ್ಷಣೆ
BIGG NEWS : ರಾಜ್ಯದಲ್ಲಿ ಮತ್ತೆ 40% ಕಮಿಷನ್ ಸದ್ದು : ಗುತ್ತಿಗೆದಾರನಿಂದ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ!