ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಇಬ್ಬರು ಮಕ್ಕಳೊಂದಿಗೆ ತಾಯಿ ಚೆಕ್ ಡ್ಯಾಮ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
BIG NEWS: ʻಪೊಲೀಸ್ ಠಾಣೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ಅಪರಾಧವಲ್ಲʼ: ಬಾಂಬೆ ಹೈಕೋರ್ಟ್
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದ ಬಳಿಯ ಚೆಕ್ ಡ್ಯಾಮ್ ಗೆ ಹಾರಿ ಇಬ್ಬರು ಮಕ್ಕಳು ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರ್ಪಿತಾ (28) ಪುತ್ರಿ ಮಾನಸ (6) ಹಾಗೂ ಪುತ್ರ ಮದನ್ (4) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಹೊಸದುರ್ಗ ತಾಲೂಕಿನ ಜಾನಕಲ್ ತಾಂಡಾದ ನಿವಾಸಿಗಳಾಗಿದ್ದು, ಪತ್ನಿ ಅರ್ಪಿತಾ ಮೇಲೆ ಪತಿ ಮಂಜಾನಾಯ್ಕ್ ಅನುಮಾನ ಪಡುತ್ತಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೆಲ್ಫಿ ವಿಡಿಯೋ ಮಾಡಿ ಅರ್ಪಿತಾ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಂಡಜ್ಜಿ ತಾಂಡಾದ ಮಂಜಾನಾಯ್ಕ ಜೊತೆ 8 ವರ್ಷಗಳ ಹಿಂದೆ ಅರ್ಪಿತಾ ವಿವಾಹವಾಗಿತ್ತು. ಪತಿ ಮಂಜಾನಾಯ್ಕ್ ಪತ್ನಿ ಮೇಲೆ ಅನುಮಾನದಿಂದ ಕುಡಿದು ಬಂದು ಹಲ್ಲೆ, ಕಿರುಕುಳ ನೀಡುತ್ತಿದ್ದ. ನೋಂದು ಅರ್ಪಿತಾ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.