ಬೆಂಗಳೂರು : ರಾಜ್ಯ, ದೇಶ ವಿದೇಶದಲ್ಲೂ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಇದೀಗ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಕಾಂತಾರ ಎಫೆಕ್ಟ್ ಕಾಣಿಸಿದೆ ಎನ್ನಬಹುದು.
ಹೌದು, ಇತ್ತೀಚೆಗಷ್ಟೇ ದೈವ ನರ್ತಕರಿಗೆ ಸರ್ಕಾರ ಮಾಸಾಶನ ಘೋಷಿಸಿತ್ತು, ಈ ಬೆನ್ನಲೇ ದೈವ ನರ್ತಕರೊಬ್ಬರು ಪ್ರಥಮ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ ಎಂಬುವವರು ಆಯ್ಕೆ ಆಗಿದ್ದಾರೆ.
ಕಾಂತಾರ ಸಿನಿಮಾದ ಮೂಲಕ ದೈವ ನರ್ತಕರು ಹಾಗೂ ಅವರ ಬದುಕಿನ ಬಗ್ಗೆ ದೊಡ್ಡ ಮಟ್ಟದಲ್ಲಿಅನಾವರಣಗೊಂಡಿದೆ. ಇಡೀ ರಾಜ್ಯ, ದೇಶ, ವಿದೇಶಕ್ಕೆ ಅವರ ಬದುಕಿನ ಅನಾವರಣವಾಗಿದೆ. ಕಾಂತಾರ ಸಿನಿಮಾದ ಎಫೆಕ್ಟ್ ನಿಂದ ದೈವನರ್ತಕರೊಬ್ಬರು ಪ್ರಥಮ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಲಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಸಂಪ್ರದಾಯವನ್ನು ಸರ್ಕಾರವು ಅನುಸರಿಸಿಕೊಂಡು ಬಂದಿದ್ದು, ಅದರಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರಿಗೆ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ.
60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ
60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಪ್ರತಿ ತಿಂಗಳು ಎರಡು ಸಾವಿರ ಮಾಸಾಶನ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, 60 ವರ್ಷ ಮೇಲ್ಪಟ್ಟ ದೈವ ನರ್ತನ ಮಾಡುವವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 2000 ಮಾಸಾಶನ ನೀಡಲಿದೆ ಎಂದರು.
ಕಾಂತಾರ ವಿವಾದ
ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದರು..ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದರು.
ಗುಜರಾತ್ ಕೇಬಲ್ ಬ್ರಿಡ್ಜ್ ದುರಂತ : ಸಂತಾಪ ಸೂಚಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು |Cable Bridge Collapses
2023ಕ್ಕೆ ವಿಧಾನಸಭೆಯಲ್ಲಿ ಕಮಲ ಅರಳುತ್ತದೆ, ಕಲ್ಯಾಣ ಕರ್ನಾಟಕದ ಕಲ್ಯಾಣ ಪರ್ವ ಆರಂಭ ಆಗುತ್ತದೆ – ಸಿಎಂ ಬೊಮ್ಮಾಯಿ