ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಟ್ವೆಂಟಿ-20 ವಿಶ್ವಕಪ್ನಲ್ಲಿ 1000 ರನ್ ಪೂರೈಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಿರುಪತಿಗೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ : ನವೆಂಬರ್ ನಿಂದ ತಿಮ್ಮಪ್ಪನ ‘ವಿಐಪಿ’ ದರ್ಶನ ಸಮಯದಲ್ಲಿ ಬದಲಾವಣೆ
ವಿರಾಟ್ ಕೊಹ್ಲಿ ಟಿ-೨೦ ವಿಶ್ವಕಪ್ ನಲ್ಲಿ ಸತತ ಎರಡು ಅರ್ಧಶತಕ ಸಿಡಿಸಿದರು. ಕೊಹ್ಲಿ 23 ಪಂದ್ಯಗಳಿಂದ 983 ರನ್ ಗಳಿಸುವ ಮೂಲಕ 1000 ರನ್ ಗಡಿ ದಾಟಲು ಕೇವಲ 11 ರನ್ ಗಳಿಂದ ಹಿಂದೆ ಇದ್ದಾರೆ.
ವಿರಾಟ್ ಕೊಹ್ಲಿ ಟಿ-20 ವಿಶ್ವಕಪ್ ನಲ್ಲಿ ಕ್ರಿಸ್ ಗೇಲ್ ಅತೀ ಹೆಚ್ಚು ರನ್ ದಾಖಲೆಯನ್ನು ಹಿಂದಿಕ್ಕಿ ಒಟ್ಟಾರೆ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಗೇಲ್ 33 ಪಂದ್ಯಗಳಿಂದ 965 ರನ್ ಗಳಿಸಿದ್ದರು.
ಟಿ-20 ವಿಶ್ವಕಪ್ ನಲ್ಲಿ 31 ಪಂದ್ಯಗಳಿಂದ 1016 ರನ್ ಗಳಿಸುವ ಮೂಲಕ ಶ್ರೀಲಂಕಾದ ಮಹೇಲಾ ಜಯವರ್ದನೆ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 11 ರನ್ ಗಳಿಸಿದರೆ 1000 ರನ್ ಗಳಿಸಿದ ಕೇವಲ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮ 35 ಪಂದ್ಯಗಳಿಂದ 904 ರನ್ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ೩೫ ಪಂದ್ಯಗಳಿಂದ 987 ರನ್ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.
ವಿಶೇಷ ಅಂದರೆ ಅಗ್ರ 5 ಸ್ಥಾನದಲ್ಲಿರುವ ಆಟಗಾರರ ಪೈಕಿ ಭಾರತದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಮಾತ್ರ ಪ್ರಸ್ತುತ ಟಿ-20 ವಿಶ್ವಕಪ್ ನಲ್ಲಿ ಆಡುತ್ತಿದ್ದು, ಇಬ್ಬರೂ ಸಾವಿರ ರನ್ ಗಡಿ ದಾಟಿದ ದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ.
ಕೊಹ್ಲಿ ಈಗಾಗಲೇ 3868 ರನ್ಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ 12 ಅರ್ಧಶತಕಗಳೊಂದಿಗೆ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. ಆದರೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 36 ಅರ್ಧಶತಕಗಳನ್ನು ಗಳಿಸಿದ್ದಾರೆ, ಇದು ಕೂಡ ದಾಖಲೆಯಾಗಿದೆ.
UPDATE : ಗುಜರಾತ್’ನಲ್ಲಿ ‘ಕೇಬಲ್ ಬ್ರಿಡ್ಜ್’ ಕುಸಿದು 7 ಮಂದಿ ಸಾವು, 400ಕ್ಕೂ ಹೆಚ್ಚು ಮಂದಿ ನದಿ ಪಾಲು