ಕಲಬುರಗಿ : ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಕುರುಬರಿಗೆ ಸಚಿವ ಸ್ಥಾನ ಕೂಡ ಸಿಗಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ನಡೆದ ಓಬಿಸಿ ವಿರಾಟ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.
ಬಸವರಾಜ್ ಬೊಮ್ಮಾಯಿ, ಹಿಂದುಳಿದ ವರ್ಗಗಳ ಜನರ ಈ ಪರಿ ಬೆಂಬಲ ನೋಡಿದರೆ ನಮ್ಮ ಗೆಲುವು ಖಚಿತ. ನಿಮಗೆ ತಾಕತ್ ಇದ್ದರೆ, ನಿಮಗೆ ಧಮ್ ಇದ್ದರೆ ನಮ್ಮ ವಿಜಯ ಪತಾಕೆಯನ್ನ ತಡೆಯಿರಿ ಅಂತಾ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲು ಎಸೆದರು.
ಜನರ ಜೋಶ್ ನೋಡಿದರೆ 2023ರಲ್ಲಿ ಬಿಜೆಪಿ ಬಾವುಟ ಹಾರುತ್ತದೆ , ಸಿದ್ದರಾಮಯ್ಯ ಅವಧಿಯಲ್ಲಿ ಕುರುಬರಿಗೆ ಸಚಿವ ಸ್ಥಾನ ಕೂಡ ಸಿಗಲಿಲ್ಲ. ಕಾಗಿನೆಲೆ ಅಭಿವೃದ್ಧಿ ಮಾಡಿದ್ದು ಬಿ.ಎಸ್. ಯಡಿಯೂರಪ್ಪ. ಸಾಮಾಜಿಕ ನ್ಯಾಯದ ಬಗ್ಗೆ ಕೇವಲ ಮಾತನಾಡಬಾರದು ಕೆಲಸ ಮಾಡಬೇಕು. ನಿಮ್ಮ ಅವಧಿಯಲ್ಲಿ ಕುರಿಗಾಹಿಗಳಿಗೆ ಏನು ಅಭಿವೃದ್ಧಿ ಮಾಡಿದ್ದೀರಿ ಎಂದೂ ಸಿಎಂ ಬೊಮ್ಮಾಯಿ ಪ್ರಶ್ನಿಸಿದ್ದಾರೆ., ಹಾಗೂ ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೋಸ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಕುರುಬರಿಗೆ ಸಚಿವ ಸ್ಥಾನ ಕೂಡ ಸಿಗಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.
ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಭಾರತೀಯರು ಚಿಂತಿತರಾಗಿದ್ದಾರೆ : ಸಮೀಕ್ಷೆ ‘
ಚಂದನವನದ ರಾಜಕುಮಾರ ‘ಪುನೀತ್’ ಸಮಾಧಿ ದರ್ಶನಕ್ಕೆ ಹರಿದು ಬಂದ ಜನಸಾಗರ |Puneeth Raj Kumar