ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಅವರ ತಾಯಿ ಜೀನತ್ ಹುಸೇನ್ ಅವರಿಗೆ ತೀವ್ರ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ದೀಪಾವಳಿಯ ಸಮಯದಲ್ಲಿ ಅಮೀರ್ ತನ್ನೊಂದಿಗೆ ಪಂಚಗಣಿ ನಿವಾಸದಲ್ಲಿದ್ದು, ಅಲ್ಲಿ ಅವರ ತಾಯಿಗೆ ತೀವ್ರ ಹೃದಯಾಘಾತವಾಗಿದೆ. ನಟ ತನ್ನ ತಾಯಿಯನ್ನ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಂದಿನಿಂದ ಅವರೊಂದಿಗೆ ಇದ್ದಾರೆ. ಕುಟುಂಬದ ಇತರ ಸದಸ್ಯರು ಅವ್ರನ್ನ ಭೇಟಿ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಅಮೀರ್ ಅವರ ತಾಯಿ ಈಗ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನವ್ರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು, ನಟ ಅಥವಾ ಅವರ ಕುಟುಂಬವು ಈ ಬಗ್ಗೆ ಇನ್ನೂ ಸಾರ್ವಜನಿಕ ಹೇಳಿಕೆ ನೀಡಿಲ್ಲ ಅಥವಾ ಯಾವುದೇ ರೀತಿಯ ದೃಢೀಕರಣವನ್ನು ನೀಡಿಲ್ಲ.
ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ: ATMಗಳಲ್ಲಿನ ಈ ವಹಿವಾಟುಗಳ ಮೇಲಿನ ಶುಲ್ಕಗಳಲ್ಲಿ ಹೆಚ್ಚಳ
Winter HealthTips: ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕಾಳಜಿ ಹೇಗೆ ಮಾಡಬೇಕು? ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್