ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ‘ಸ್ವೀಟ್ ಬಾಕ್ಸ್ ಲಂಚ’ದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಗೆ ಟಾಂಗ್ ನೀಡಿದೆ.
ರಾಜ್ಯ ರಾಜಕಾರಣದಲ್ಲಿ ಪರ್ತಕರ್ತರಿಗೆ ಬೊಮ್ಮಾಯಿ ಸರ್ಕಾರ ಸ್ವೀಟ್ ಬಾಕ್ಸ್ ಜೊತೆ ಲಕ್ಷಾಂತರ ರೂ ಹಣ ನೀಡಿದೆ ಎಂಬ ವಿಚಾರ ಭಾರೀ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳ ಸುರಿಮಳೆ ಗೈದಿದೆ.
ರಾಜ್ಯ ಬಿಜೆಪಿ ನರ್ಕಾರ ‘ಸ್ವೀಟ್ ಬಾಕ್ಸ್ ಲಂಚ’ದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ , ಬೊಮ್ಮಾಯಿ ಅವರು “ಕಾಂಗ್ರೆಸ್ನವರೂ ಕೊಟ್ಟಿದ್ದಾರೆ” ಎನ್ನುವ ಮೂಲಕ ‘ಸ್ವೀಟ್ ಬಾಕ್ಸ್ ಲಂಚ’ದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡು. ಕಾಂಗ್ರೆಸ್ ಸರ್ಕಾರಿ ಆಡಳಿತ ಯಂತ್ರ ಬಳಸಿದ್ದರೆ, ಸರ್ಕಾರದ ಹಣ ಕೊಟ್ಟಿದ್ದರೆ ಸಾಕ್ಷಿ ನೀಡಲಿ. ಮೊದಲು ಜನರ ಹಣವನ್ನು ಲಂಚ ನೀಡಲು ಬಳಸಿದ್ದು ತನಿಖೆಯಾಗಲಿ ಎಂದು ವಾಗ್ಧಾಳಿ ನಡೆಸಿದೆ.
ಮಾಡಿದ್ದು ಭ್ರಷ್ಟಾಚಾರವಾದರೂ @BJP4Karnataka & @BSBommai ಅವರು "ಕಾಂಗ್ರೆಸ್ನವರೂ ಕೊಟ್ಟಿದ್ದಾರೆ" ಎನ್ನುವ ಮೂಲಕ 'ಸ್ವೀಟ್ ಬಾಕ್ಸ್ ಲಂಚ'ದ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡು.
ಕಾಂಗ್ರೆಸ್ ಸರ್ಕಾರಿ ಆಡಳಿತ ಯಂತ್ರ ಬಳಸಿದ್ದರೆ, ಸರ್ಕಾರದ ಹಣ ಕೊಟ್ಟಿದ್ದರೆ ಸಾಕ್ಷಿ ನೀಡಲಿ.
ಮೊದಲು ಜನರ ಹಣವನ್ನು ಲಂಚ ನೀಡಲು ಬಳಸಿದ್ದು ತನಿಖೆಯಗಲಿ
— Karnataka Congress (@INCKarnataka) October 30, 2022