ಬೆಂಗಳೂರು: ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿ ವಿವಾದತ್ಮಕ ಡೈಲಾಗ್ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿತ್ತು. ಇದರ ನಡುವೆ ಚಿತ್ರದ ಬಗ್ಗೆ ಪ್ರಚಾರ ಮಾಡುತ್ತಿದ್ದವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಪೋಸ್ಟರ್ ಹಿಡಿದು ಕಿರುಚಾಡುತ್ತಿದ್ದವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ರಸ್ತೆಯಲ್ಲಿ ಪೋಸ್ಟರ್ ಹಿಡಿದು ಕಿರುಚಾಟ ನಡೆಸಿ , ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಲಾಗಿದೆ ಎಂದು ಐವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ. ಶಿವಕುಮಾರ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ವ್ಯಕ್ತಿಗಳ ಬಗ್ಗೆ ಯಾವುದೇ ಗುರುತು ಬಹಿರಂಗವಾಗಿಲ್ಲ.
ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿ ವಿವಾದತ್ಮಕ ಡೈಲಾಗ್ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿತ್ತು. ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜುಜುಬಿ ಕರಗ ಪದ ಮ್ಯೂಟ್ ಮಾಡಲು ಚಿತ್ರ ತಂಡ ಒಪ್ಪಿಕೊಂಡಿತ್ತು,
ಸಂಧಾನ ಸಭೆ ಬಳಿಕ ಮಾತನಾಡಿದ್ದ ಸಿನಿಮಾದ ನಟ, ಹಾಗೂ ನಿರ್ಮಾಪಕ ಧನಂಜಯ್ ಯಾರನ್ನು ನೋವು ಮಾಡುವುದು ನಮ್ಮ ಉದ್ದೇಶವಾಗಿಲ್ಲ, ಬೇಸರವಾಗಿರುವ ಪದವನ್ನು ಮ್ಯೂಟ್ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದೇವೆ. ಸಮಸ್ಯೆಯನ್ನು ಬಗೆಹರಿಸಲು ಸಹಕರ ನೀಡಿದ ಎಲ್ಲರಿಗೂ ಧನ್ಯವಾದವನ್ನು ಹೇಳಿದ್ದರು, ಇಲ್ಲಿಗೆ ವಿವಾದ ಸುಖಾಂತ್ಯಗೊಂಡಿದೆ.
ಸಿಎಂ ಬೊಮ್ಮಾಯಿಗೆ ಧಮ್ಮು,, ತಾಕತ್ತಿದ್ದರೇ ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆಗೆ ನೀಡಿ ತೋರಿಸಲಿ – DKS ಸವಾಲು
‘ಮಹಿಳೆಯರ ಮೇಲೆ ಬಿಜೆಪಿಗರ ದರ್ಪ, ದೌರ್ಜನ್ಯ ಮಿತಿ ಮೀರುತ್ತಿದೆ : ಕಾಂಗ್ರೆಸ್ ವಾಗ್ಧಾಳಿ
Women’s Constables ; ಗುಡ್ ನ್ಯೂಸ್.. 2626 ‘ಮಹಿಳಾ ಕಾನ್ಸ್ಟೇಬಲ್’ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ