ನವದೆಹಲಿ : ಜಮ್ಮು-ಕಾಶ್ಮೀರದ ಸಾಂಬಾ ವಲಯದ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಕಂಡುಬಂದಿದೆ. ನಿನ್ನೆ (ಶನಿವಾರ) ತಡರಾತ್ರಿ ಈ ಘಟನೆ ನಡೆದಿದ್ದು, ಮಾಹಿತಿಯನ್ನ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ಅಂದರೆ ಭಾನುವಾರ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸರು, ಡ್ರೋನ್ ಕೆಲವು ನಿಮಿಷಗಳ ಕಾಲ ಭಾರತದಲ್ಲಿ ಹಾರಾಡಿ ನಂತ್ರ ಪಾಕಿಸ್ತಾನದ ಕಡೆಗೆ ಹಿಂತಿರುಗಿತು ಎಂದು ಹೇಳಿದರು. ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
2019ರಲ್ಲಿ ಮೊದಲ ಬಾರಿಗೆ, ಪಾಕಿಸ್ತಾನಿ ಭಯೋತ್ಪಾದಕರು ಡ್ರೋನ್ಗಳೊಂದಿಗೆ ಭಾರತದಲ್ಲಿ ಶಸ್ತ್ರಾಸ್ತ್ರ ಸರಕುಗಳನ್ನ ಬೀಳಿಸುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಎಂದು ತಿಳಿದಿದೆ. ಅದೇ ಸಮಯದಲ್ಲಿ, ಬಿಎಸ್ಎಫ್ ಸಿಬ್ಬಂದಿ ಹೆಚ್ಚಾಗಿ ಗಡಿಯಾಚೆಯಿಂದ ಬರುವ ಡ್ರೋನ್ಗಳನ್ನು ತಕ್ಷಣವೇ ಹೊಡೆದುರುಳಿಸುತ್ತಾರೆ. ಇದಕ್ಕೂ ಮುನ್ನ ಶುಕ್ರವಾರ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಪಾಕಿಸ್ತಾನದ ನುಸುಳುಕೋರನನ್ನ ಹತ್ಯೆ ಮಾಡಿದ್ದರು. ಈ ನುಸುಳುಕೋರನು ಶೂನ್ಯ ರೇಖೆಯಿಂದ ಸುಮಾರು 250 ಮೀಟರ್ ದೂರದಲ್ಲಿ ಭಾರತದ ಗಡಿಗೆ ಬಂದಿದ್ದ.
BIGG NEWS : 1.30 ಕೋಟಿ ರೂ. ಲಂಚ ಪಡೆದ ಆರೋಪ : ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
BREAKING NEWS ; ‘CBI’ಗೆ ನೀಡಿದ್ದ ಸಾಮಾನ್ಯ ಸಮ್ಮತಿ ಹಿಂಪಡೆದ ತೆಲಂಗಾಣ ಸರ್ಕಾರ.!
BIGG NEWS: ಇಮ್ರಾನ್ ಖಾನ್ ಮುಂದಿನ ಸೇನಾ ಮುಖ್ಯಸ್ಥರ ಪ್ರಸ್ತಾಪವನ್ನು ತಿರಸ್ಕರಿಸಿದ ಪಾಕ್ ಪ್ರಧಾನಿ ಶೆಹಬಾಜ್