ವಡೋದರಾ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್’ನ ವಡೋದರಾದಲ್ಲಿ ಟಾಟಾ–ಏರ್ ಬಸ್’ನ ಸಿ-295 ಸಾರಿಗೆ ವಿಮಾನ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ವಡೋದರಾದಲ್ಲಿರುವ ವಿಮಾನ ಉತ್ಪಾದನಾ ಸೌಲಭ್ಯವು ವೈಮಾನಿಕ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ಭಾರತಕ್ಕೆ ಒಂದು ದೊಡ್ಡ ಜಿಗಿತವಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾವು ವಿಮಾನ ವಾಹಕಗಳು, ಜಲಾಂತರ್ಗಾಮಿ ನೌಕೆಗಳನ್ನ ತಯಾರಿಸುತ್ತಿದ್ದೇವೆ. ಇಷ್ಟೇ ಅಲ್ಲ, ಭಾರತದಲ್ಲಿ ತಯಾರಿಸಿದ ಔಷಧಿಗಳು ವಿಶ್ವದ ಜನರ ಜೀವವನ್ನ ಉಳಿಸುತ್ತಿವೆ. ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ಗ್ಲೋಬ್ ಎಂಬ ಮಂತ್ರದ ಮೇಲೆ ಮುಂದುವರಿಯುತ್ತಿರುವ ಭಾರತ ಇಂದು ತನ್ನ ಶಕ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದೆ. ಈಗ ಭಾರತವು ಸಾರಿಗೆ ವಿಮಾನಗಳ ದೊಡ್ಡ ತಯಾರಕ ರಾಷ್ಟ್ರವಾಗಲಿದೆ. ಇದು ಇಂದು ಭಾರತದಲ್ಲಿ ಪ್ರಾರಂಭವಾಗುತ್ತಿದೆ” ಎಂದು ಹೇಳಿದರು.
ಅಂದ್ಹಾಗೆ, ವಾಯು ಸಂಚಾರದ ವಿಷಯದಲ್ಲಿ ಟಾಪ್ 3 ದೇಶಗಳಲ್ಲಿ ಭಾರತವೂ ಒಂದಾಗಿದೆ.
ಇನ್ನು “ಭಾರತದ ರಕ್ಷಣಾ ಏರೋಸ್ಪೇಸ್ ವಲಯದಲ್ಲಿ ಇಷ್ಟು ದೊಡ್ಡ ಹೂಡಿಕೆ ನಡೆಯುತ್ತಿರುವುದು ಇದೇ ಮೊದಲು. ವಡೋದರಾದಲ್ಲಿ ನಿರ್ಮಾಣವಾಗಲಿರುವ ಸಾರಿಗೆ ವಿಮಾನವು ನಮ್ಮ ಸೇನೆಗೆ ಬಲವನ್ನ ನೀಡುವುದಲ್ಲದೇ, ವಿಮಾನ ತಯಾರಿಕೆಗೆ ಹೊಸ ಪರಿಸರ ವ್ಯವಸ್ಥೆಯನ್ನ ಅಭಿವೃದ್ಧಿಪಡಿಸುತ್ತದೆ” ಎಂದು ಹೇಳಿದರು. ವಾಯು ಸಂಚಾರದ ವಿಷಯದಲ್ಲಿ, ನಾವು ವಿಶ್ವದ ಅಗ್ರ ಮೂರು ದೇಶಗಳನ್ನ ತಲುಪಲಿದ್ದೇವೆ ಎಂದರು.
‘ಇಸ್ರೋ’ದ ಉಪಗ್ರಹ ಯಶಸ್ಸಿನೊಂದಿಗೆ ‘ಭಾರತ’ ಬಾಹ್ಯಾಕಾಶದಲ್ಲಿ ಅದ್ಭುತಗಳನ್ನು ಮಾಡುತ್ತಿದೆ : ಪ್ರಧಾನಿ ಮೋದಿ