ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರೋಜ್ಗಾರ್(Rozgar Mela) ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಅವರು ʻಸರ್ಕಾರಿ ಸೇವೆಗಳಿಗೆ ಸೇರುವ ಯುವಕರು ಪಾರದರ್ಶಕತೆಗೆ ಆದ್ಯತೆ ನೀಡಬೇಕುʼ ಎಂದು ಹೇಳಿದರು.
ಕಾನ್ಫರೆನ್ಸಿಂಗ್ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಏರ್ಪಡಿಸಲಾಗಿದ್ದ ರೋಜ್ಗಾರ್ ಮೇಳವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡಲು 3,000 ಯುವಕರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗುತ್ತಿದೆ. 21 ನೇ ಶತಮಾನದ ಈ ದಶಕವು ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಶಕವಾಗಿದೆ. ಇದು ಹಳೆಯ ಸವಾಲುಗಳನ್ನು ಬಿಟ್ಟು ಹೊಸ ಸಾಧ್ಯತೆಗಳ ಸಂಪೂರ್ಣ ಲಾಭ ಪಡೆಯುವ ಸಮಯವಾಗಿದೆ. ಜಮ್ಮು ಮತ್ತು ಕಾಶ್ಮೀರದ ಯುವಕರು ಈ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರಧಾನಿ ಹೇಳಿದರು.
“ಜಮ್ಮು ಮತ್ತು ಕಾಶ್ಮೀರವು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯಾಗಿದೆ. ನಾವು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. 2019 ರಿಂದ ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 30,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ನನಗೆ ಹೇಳಲಾಗಿದೆ. ಅದರಲ್ಲಿ ಸುಮಾರು 20,000 ಉದ್ಯೋಗಗಳು ಕಳೆದ 1-1.5 ವರ್ಷಗಳಲ್ಲಿ ನೀಡಲಾಗಿದೆ” ಎಂದರು.
ಕಾಶಿಗೆ ಹೊರಡುವವರಿಗೆ ಸಿಹಿ ಸುದ್ದಿ: ರಾಜ್ಯ ಸರಕಾರದಿಂದ 5 ಸಾವಿರ ರೂ. ಸಹಾಯಧನ
ರೆಡಿ, ಸ್ಟೆಡಿ, ಗೋ: ʻಭಾರತ್ ಜೋಡೋ ಯಾತ್ರೆʼ ವೇಳೆ ಮಕ್ಕಳೊಂದಿಗೆ ʻರಾಹುಲ್ ಗಾಂಧಿʼ ರನ್ನಿಂಗ್ ರೇಸ್ | Watch Video
BIGG NEWS : ಪ್ರಧಾನಿ ಮೋದಿ `ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ ಮುಖ್ಯಾಂಶಗಳು ಹೀಗಿದೆ|Mann Ki Baat
ಕಾಶಿಗೆ ಹೊರಡುವವರಿಗೆ ಸಿಹಿ ಸುದ್ದಿ: ರಾಜ್ಯ ಸರಕಾರದಿಂದ 5 ಸಾವಿರ ರೂ. ಸಹಾಯಧನ